ನಂದಿಬೆಟ್ಟಕ್ಕೆ ಹರಿದು ಬಂದ ಪ್ರವಾಸಿಗರು; ಟಾಯ್ಲೆಟ್ಗೆ ಸಮಸ್ಯೆ, ಗಂಟೆಗಟ್ಟಲೆ ಕ್ಯೂನಲ್ಲಿ ನಿಂತ ಲೇಡಿಸ್
ವೀಕೆಂಡ್ ಹಿನ್ನೆಲೆ ಚಿಕ್ಕಬಳ್ಳಾಪುರದ ನಂದಿಬೆಟ್ಟಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದ್ದು, ಪ್ರವಾಸಿಗರು ಹೆಚ್ಚಾದ ಹಿನ್ನೆಲೆ ಮಿರ್ಜಾ ಸರ್ಕಲ್ನಿಂದ ಗಿರಿಧಾಮದ ತುತ್ತ ತುದಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.
ಚಿಕ್ಕಬಳ್ಳಾಪುರ: ವೀಕೆಂಡ್ ಹಿನ್ನೆಲೆ ಚಿಕ್ಕಬಳ್ಳಾಪುರದ ನಂದಿಬೆಟ್ಟ(Nandi Hills)ಕ್ಕೆ ಪ್ರವಾಸಿಗರ ದಂಡೇ ಹರಿದು ಬಂದಿದೆ. ಪ್ರವಾಸಿಗರು ಹೆಚ್ಚಾದ ಹಿನ್ನೆಲೆ ಮಿರ್ಜಾ ಸರ್ಕಲ್ನಿಂದ ಗಿರಿಧಾಮದ ತುತ್ತ ತುದಿಯವರೆಗೂ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಾರು ಹಾಗೂ ಬೈಕ್ಗಳನ್ನು ದಾರಿಯಲ್ಲೆ ಬಿಟ್ಟು ಕಾಲ್ನೇಡಿಗೆಯಲ್ಲಿ ಪ್ರವಾಸಿಗರು ಬೆಟ್ಟ ಹತ್ತಿದ್ದಾರೆ. ಇತ್ತ ಶೌಚಾಲಯಕ್ಕೆ ತೆರಳಲೂ ಮಹಿಳೆಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಜಿಲ್ಲಾಡಳಿತದ ವಿರುದ್ಧ ಪ್ರವಾಸಿಗರು ಕಿಡಿ ಕಾರಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ