ನಿರ್ಬಂಧದ ನಡುವೆಯೋ ನಂದಿಬೆಟ್ಟ, ಸ್ಕಂದಗಿರಿಗೆ ಹರಿದು ಬಂದ ಜನ ಸಾಗರ; ಪ್ರವಾಸಿಗರನ್ನು ವಾಪಾಸ್ ಕಳಿಸುತ್ತಿರುವ ಪೊಲೀಸರು
ಡಿಸಿ ಆದೇಶ ಉಲ್ಲಂಘನೆಯಾಗಿದ್ದು ಪ್ರವೇಶ ನಿರ್ಬಂಧದ ಮಧ್ಯೆಯೂ ನೂರಾರು ಜನ ಪ್ರವಾಸಿಗರು ನಂದಿಬೆಟ್ಟ, ಸ್ಕಂದಗಿರಿಗೆ ಆಗಮಿಸಿದ್ದಾರೆ. ಸದ್ಯ ಈಗ ಪೊಲೀಸರು ಹರಸಾಹಸ ಪಟ್ಟು ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಆಗಮನ ಹಿನ್ನೆಲೆ ಇಂದಿನಿಂದ 2 ದಿನ ನಂದಿಬೆಟ್ಟ(Nandi Hills), ಸ್ಕಂದಗಿರಿ ಬೆಟ್ಟಕ್ಕೆ(Skandagiri) ಪ್ರವೇಶ ನಿರ್ಬಂಧ ಹೇರಲಾಗಿದೆ. ಆದ್ರೆ ಡಿಸಿ ಆದೇಶ ಉಲ್ಲಂಘನೆಯಾಗಿದ್ದು ಪ್ರವೇಶ ನಿರ್ಬಂಧದ ಮಧ್ಯೆಯೂ ನೂರಾರು ಜನ ಪ್ರವಾಸಿಗರು ನಂದಿಬೆಟ್ಟ, ಸ್ಕಂದಗಿರಿಗೆ ಆಗಮಿಸಿದ್ದಾರೆ. ಸದ್ಯ ಈಗ ಪೊಲೀಸರು ಹರಸಾಹಸ ಪಟ್ಟು ಪ್ರವಾಸಿಗರನ್ನು ವಾಪಸ್ ಕಳುಹಿಸುತ್ತಿದ್ದಾರೆ. ರಸ್ತೆ ಮಧ್ಯೆ ಬ್ಯಾರಿಕೇಡ್ ಹಾಕಲಾಗಿದೆ.
ಜುಲೈ 3ರಂದು ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸುತ್ತಿದ್ದಾರೆ. ಚಿಕ್ಕಬಳ್ಳಾಫುರ ತಾಲೂಕಿನ ಮುದ್ದೇನಹಳ್ಳಿ ಗ್ರಾಮದ ಬಳಿ ಇರುವ ಶ್ರೀ ಸತ್ಯಸಾಯಿ ಲೋಕಸೇವಾ ಆಶ್ರಮಕ್ಕೆ ಆಗಮಿಸಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಭದ್ರತೆ ದೃಷ್ಟಿಯಿಂದ ಇಂದಿನಿಂದ 2 ದಿನ ನಂದಿಬೆಟ್ಟ, ಸ್ಕಂದಗಿರಿ ಬೆಟ್ಟಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ರವೀಂದ್ರ ಆದೇಶ ಹೊರಡಿಸಿದ್ದರು. ಆದ್ರೆ ಪ್ರವೇಶ ನಿರ್ಬಂಧದ ಬಗ್ಗೆ ಮಾಹಿತಿ ಇಲ್ಲದೇ ಪ್ರವಾಸಿಗರು ಆಗಮಿಸಿದ್ದಾರೆ. ಹೀಗಾಗಿ ಗಿರಿಧಾಮಕ್ಕೆ ಬಂದವರನ್ನು ಪೊಲೀಸರು ವಾಪಾಸ್ ಕಳಿಸುತ್ತಿದ್ದಾರೆ. ರಸ್ತೆ ಮಧ್ಯೆ ಬ್ಯಾರಿಕೇಡ್ಗಳನ್ನು ಹಾಕಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಗಿರಿಧಾಮಗಳಿಗೆ ಬೀಗ ಹಾಕಲಾಗಿದೆ. ಮುದ್ದೇನಹಳ್ಳಿಗೆ ಗಿರಿಧಾಮಗಳು ಹೊಂದಿಕೊಂಡಿರುವ ಕಾರಣ ಭದ್ರತೆ ದೃಷ್ಟಿಯಿಂದ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.
ಇದನ್ನೂ ಓದಿ: ನಂದಿಗಿರಿಧಾಮದಲ್ಲಿ ಪ್ರಪಾತಕ್ಕೆ ಬಿದ್ದು 112ಗೆ ಕರೆ ಮಾಡಿ ರಕ್ಷಣೆ ಮಾಡುವಂತೆ ಗೋಗರೆದ ಯುವಕರು
ಇಂದು ಬೆಳಗ್ಗೆ 6ರಿಂದ ಜು.3ರ ಸಂಜೆ 6ರವರೆಗೆ ಬೆಟ್ಟಕ್ಕೆ ಪ್ರವೇಶ ನಿರ್ಬಂಧ ಇರಲಿದೆ. ಸದ್ಯ ಗಿರಿಧಾಮಗಳಿಗೆ ಬರದಂತೆ ಪ್ರವಾಸಿಗರಿಗೆ ಡಿಸಿ ರವೀಂದ್ರ ಮನವಿ ಮಾಡಿದ್ದಾರೆ. ರಾಜಧಾನಿ ಬೆಂಗಳೂರು ಜನರ ಫೇವರೇಟ್ ಹಾಟ್ ಸ್ಪಾಟ್ ಆಗಿರುವ ನಂದಿಹಿಲ್ಸ್ ಬಂದ್ ಆಗಿರುವ ವಿಚಾರ ತಿಳಿಯದೆ ವೀಕೆಂಡ್ ಎಂಜಾಯ್ ಮಾಡಲು ನೂರಾರು ಮಂದಿ ಆಗಮಿಸಿದ್ದು ಪೊಲೀಸರಿಗೆ ತಲೆ ನೋವಾಗಿತ್ತು.
ಚಿಕ್ಕಬಳ್ಳಾಪುರ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ