ಬಂಡಾಜೆ ಜಲಪಾತ ನೋಡಲು ರುದ್ರ ರಮಣೀಯ; ಆದರೆ ಪ್ರವಾಸಿಗರ ಹುಚ್ಚಾಟಗಳು ಅನಪೇಕ್ಷಣೀಯ

Updated on: Jul 21, 2025 | 11:27 AM

ಮೂಡಿಗೆರೆಯ ರಾಣಿಝರಿ ಮೂಲಕ ಟ್ರೆಕ್ಕಿಂಗ್ ಮಾಡಿಕೊಂಡು ಬಂದಿರುವ ಜನ ಇವರು ಎಂದು ನಮ್ಮ ವರದಿಗಾರ ಹೇಳುತ್ತಾರೆ. ಅವರ ಸಾಹಸದ ಬಗ್ಗೆ ನಿಸ್ಸಂದೇಹವಾಗಿ ಕನ್ನಡಿಗರಲ್ಲಿ ಮೆಚ್ಚುಗೆ ಇದೆ. ಚಾರ್ಮಾಡಿ ಘಾಟ್​ನಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಬೆಟ್ಟ ಪ್ರದೇಶದಲ್ಲಿ ಜಲಪಾತಗಳು ಭೋರ್ಗರೆಯುತ್ತಿವೆ. ಕಲ್ಲುಬಂಡೆಗಳ ಮೇಲೆ ಆಕಸ್ಮಾತ್ ಕಾಲು ಜಾರಿದರೆ ಪ್ರಪಾತಕ್ಕೆ ಬೀಳುವ ಅಪಾಯವಿದೆ.

ಚಿಕ್ಕಮಗಳೂರು, ಜುಲೈ 21: ಇದು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಪ್ರಯತ್ನವಲ್ಲದೆ ಮತ್ತೇನೂ ಅಲ್ಲ. ಇವರು ಮಾಡುವ ಹುಚ್ಚು ಸಾಹಸಗಳಿಗೆ (dangerous acts) ಸರ್ಕಾರ, ಸ್ಥಳೀಯ ಆಡಳಿತ ಮತ್ತು ಪೊಲೀಸರನ್ನು ದೂರಲಾಗುತ್ತದೆ. ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಗಡಿಭಾಗದ ಪ್ರದೇಶದಲ್ಲಿರುವ ಬಂಡಾಜೆ ಜಲಪಾತ ನೋಡಲು ರುದ್ರ ರಮಣೀಯ, ಪ್ರಕೃತಿಯ ಸೌಂದರ್ಯ ಸವಿಯಲು ಎರಡು ಕಣ್ಣು ಸಾಲದು. ಜಲಪಾತದ ಮತ್ತೊಂದು ಭಾಗದಲ್ಲಿ ನಿಂತು ಜನ ಅದನ್ನು ಮಾಡುತ್ತಿದ್ದಾರೆ, ಅದರೆ ಒಂದಷ್ಟು ಸಾಹಸಪ್ರಿಯರು ನೀರು ಬೀಳುತ್ತಿರುವ ಸ್ಥಳದ ಹತ್ತಿರ ಹೋಗಿ ಬಂಡೆಗಳ ಮೇಲೆ ನಿಂತು ಅದ್ಯಾರನ್ನು ಇಂಪ್ರೆಸ್ ಮಾಡುತ್ತಿದ್ದಾರೋ? ಇಂಥ ಅಪಾಯಕಾರಿ ಸ್ಟಂಟ್, ಹುಚ್ಚಾಟಗಳು ಬೇಡ ಅಂತ ಸ್ಥಳೀಯ ಆಡಳಿತಗಳು ಹೇಳಿದರೂ ಇಲ್ಲಿರುವ ಜನಕ್ಕೆ ಅರಿವಿಲ್ಲ ಮಾರಾಯ್ರೇ.

ಇದನ್ನೂ ಓದಿ:  ಕರ್ನಾಟಕದ ಈ ಸುಂದರ ಜಲಪಾತಗಳನ್ನು ಕಣ್ತುಂಬಿಸಿಕೊಳ್ಳಿ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ