Toxic Movie: ಯಶ್‌ಗೆ ವಿಶೇಷ ಸರ್ಪ್ರೈಸ್ ನೀಡಿದ ಮಂಗಳೂರಿನ ಅಭಿಮಾನಿ; ವಿಮಾನ ನಿಲ್ದಾಣದಲ್ಲಿ ‘ಟಾಕ್ಸಿಕ್’ ಖಡಕ್ ಪೇಂಟಿಂಗ್ ಗಿಫ್ಟ್
ಮಂಗಳೂರಿನಲ್ಲಿ ಆ.25ರಂದು ಬಿಡುಗಡೆಯಾದ ಯಶ್ ನಟನೆಯ 'ಟಾಕ್ಸಿಕ್' ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ನಂತರ ಯಶ್ ದೊಡ್ಡ ಪರದೆಯಲ್ಲಿ ಕಾಣಿಸಿಕೊಂಡ ಈ ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಿಸಿದೆ. ಚಿತ್ರ ಬಿಡುಗಡೆಗೂ ಮುನ್ನ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ ಯಶ್ ಅವರಿಗೆ ಮಂಗಳೂರಿನ ಅಭಿಮಾನಿ ಜೀವನ್ ಕುಲಾಲ್ ಅವರು ಟಾಕ್ಸಿಕ್ ದೃಶ್ಯದ ಕೈಯಾರೇ ಬಿಡಿಸಿದ ವಿಶೇಷ ಪೇಂಟಿಂಗ್ ಉಡುಗೊರೆಯಾಗಿ ನೀಡಿದರು.
ಮಂಗಳೂರು, ಆ.25: ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವ ನಡುವೆಯೇ, ನಟ ಯಶ್ ಅವರ ಕರಾವಳಿ ಪ್ರವಾಸದ ವೇಳೆ ಅಭಿಮಾನಿಯೊಬ್ಬರು ನೀಡಿದ ವಿಶೇಷ ಉಡುಗೊರೆ ಎಲ್ಲರ ಗಮನ ಸೆಳೆದಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಿಸಿರುವ ಈ ಬಿಗ್ ಬಜೆಟ್ ಚಿತ್ರದ ಬಿಡುಗಡೆಗೂ ಮುನ್ನ ಯಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ವೇಳೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಭೇಟಿಯಾದ ಯುವ ಕಲಾವಿದ ಹಾಗೂ ತೀವ್ರ ಅಭಿಮಾನಿ ಜೀವನ್ ಕುಲಾಲ್, ತಮ್ಮ ಕೈಯಾರೆ ಬಿಡಿಸಿದ ವಿಶೇಷ ಚಿತ್ರಕಲೆಯನ್ನು ಯಶ್‌ಗೆ ಹಸ್ತಾಂತರಿಸಿದ್ದಾರೆ. ಯಶ್ ಮಂಗಳೂರಿಗೆ ಭೇಟಿ ನೀಡುವ ಸುದ್ದಿ ತಿಳಿಯುತ್ತಿದ್ದಂತೆ ಜೀವನ್ ಕುಲಾಲ್ ಅವರು ಒಂದು ವಾರದ ಮುಂಚಿತವಾಗಿಯೇ ಉಡುಗೊರೆ ಸಿದ್ಧಪಡಿಸಲು ಆರಂಭಿಸಿದ್ದರು. ‘ಪ್ರಿಸ್ಮಾಕಲರ್’ (Prismacolor) ಬಣ್ಣದ ಪೆನ್ಸಿಲ್‌ಗಳನ್ನು ಬಳಸಿ ‘ಟಾಕ್ಸಿಕ್’ ಸಿನಿಮಾದ ಖಡಕ್ ದೃಶ್ಯವೊಂದನ್ನು ಅತ್ಯಂತ ರಸವತ್ತಾಗಿ ಪೇಂಟಿಂಗ್ ಮಾಡಿ, ಅದನ್ನು ವಿಮಾನ ನಿಲ್ದಾಣದಲ್ಲಿ ನೇರವಾಗಿ ಯಶ್ ಅವರಿಗೆ ನೀಡಿ ತಮ್ಮ ನೆಚ್ಚಿನ ನಟನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಟಾಕ್ಸಿಕ್ ಸಿನಿಮಾ ರಿಲೀಸ್ ಲೈವ್ ಅಪ್ಡೇಟ್ಸ್ಗೆ ಇಲ್ಲಿ ಕ್ಲಿಕ್ ಮಾಡಿ

