ಶೂಟಿಂಗ್​ ಸೆಟ್​ನಲ್ಲಿ ಶಿವಣ್ಣ-ಯಶ್​ ಭೇಟಿ; ಇಬ್ಬರ ಗೆಟಪ್​​ ನೋಡಿ ಫ್ಯಾನ್ಸ್​ ಫಿದಾ

Updated on: Aug 19, 2024 | 5:18 PM

ಬಹುನಿರೀಕ್ಷಿತ ‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ ಚಾಲ್ತಿಯಲ್ಲಿದೆ. ನಟ ಯಶ್​ ಅವರು ಈ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಬಿಡುವು ಪಡೆದುಕೊಂಡ ಅವರು ಶಿವರಾಜ್​ಕುಮಾರ್​ ನಟನೆಯ 131ನೇ ಸಿನಿಮಾದ ಸೆಟ್​ಗೆ ತೆರಳಿದ್ದಾರೆ. ಯಶ್​ ಹಾಗೂ ಶಿವರಾಜ್​ಕುಮಾರ್​ ಅವರು ಶೂಟಿಂಗ್​ ಸೆಟ್​ನಲ್ಲಿ ಭೇಟಿಯಾದ ವಿಡಿಯೋ ಇಲ್ಲಿದೆ ನೋಡಿ..

‘ರಾಕಿಂಗ್​ ಸ್ಟಾರ್​’ ಯಶ್​ ಅವರು ‘ಟಾಕ್ಸಿಕ್​’ ಸಿನಿಮಾದ ಶೂಟಿಂಗ್​ನಲ್ಲಿ ತೊಡಗಿಕೊಂಡಿದ್ದಾರೆ. ಇತ್ತೀಚೆಗೆ ಈ ಚಿತ್ರಕ್ಕೆ ಚಿತ್ರೀಕರಣ ಆರಂಭ ಆಯಿತು. ಇನ್ನು, ನಟ ಶಿವರಾಜ್​ಕುಮಾರ್​ ಅವರು ಕೂಡ 131ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಬೆಂಗಳೂರಿನಲ್ಲಿ ಈ ಎರಡೂ ಸಿನಿಮಾಗಳ ಶೂಟಿಂಗ್​ ನಡೆಯುತ್ತಿದೆ. ಎಚ್​ಎಂಟಿ ಗ್ರೌಂಡ್​ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಶೂಟಿಂಗ್​ ಬಿಡುವಿನಲ್ಲಿ ಯಶ್​ ಮತ್ತು ಶಿವಣ್ಣ ಅವರು ಭೇಟಿ ಆಗಿದ್ದಾರೆ. ಕೆಲವು ನಿಮಿಷಗಳ ಕಾಲ ಅವರು ಬ್ರೇಕ್​ ತೆಗೆದುಕೊಂಡು ಉಭಯ ಕುಶಲೋಪರಿ ಮಾತನಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಯಶ್​ ಮತ್ತು ಶಿವರಾಜ್​ಕುಮಾರ್​ ಅವರ ಗೆಟಪ್​ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More