‘ಜೇಮ್ಸ್​ ಚಿತ್ರದ ‘ಟ್ರೇಡ್​ಮಾರ್ಕ್..​’ ಸಾಂಗ್​ ನೋಡಿ ಕುಣಿದು ಕುಪ್ಪಳಿಸಿದ ಫ್ಯಾನ್ಸ್; ಇಲ್ಲಿದೆ ವಿಡಿಯೋ

| Updated By: ರಾಜೇಶ್ ದುಗ್ಗುಮನೆ

Updated on: Mar 01, 2022 | 3:05 PM

ಈ ಸಾಂಗ್​ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಚೇತನ್​ ಕುಮಾರ್ ನಿರ್ದೇಶನದ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟಾಗಿದೆ. ಹಾಗಾದರೆ ಅಭಿಮಾನಿಗಳ ಸಂಭ್ರಮ ಹೇಗಿತ್ತು ಎಂಬುದನ್ನು ನೋಡೋಕೆ ಈ ವಿಡಿಯೋ ವೀಕ್ಷಿಸಿ.

ಪುನೀತ್​ ರಾಜ್​ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್​’ ಸಿನಿಮಾ (James Movie) ಬಗ್ಗೆ ಇರುವ ಕುತೂಹಲ ದಿನಕಳೆದಂತೆ ಹೆಚ್ಚುತ್ತಲೇ ಇದೆ. ಇನ್ನೇನು ಎರಡು ವಾರಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ಪುನೀತ್​ ಜನ್ಮದಿನದ ಪ್ರಯುಕ್ತ ಫೆಬ್ರವರಿ 17ರಂದು ‘ಜೇಮ್ಸ್​’ ತೆರೆಗೆ ಬರುತ್ತಿದೆ. ಇತ್ತೀಚೆಗೆ ಬಿಡುಗಡೆಯಾಗಿದ್ದ ಸಿನಿಮಾದ ಟೀಸರ್​ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿತ್ತು. ಈಗ ಈ ಸಿನಿಮಾದ ‘ಟ್ರೇಡ್​ಮಾರ್ಕ್​..’ ಸಾಂಗ್​ (Trademark Song)ರಿಲೀಸ್​ ಆಗಿದೆ. ಈ ಹಾಡಿನಲ್ಲಿ ರಚಿತಾ ರಾಮ್​, ಶ್ರೀಲೀಲಾ, ಆಶಿಕಾ ರಂಗನಾಥ್, ಚಂದನ್​ ಶೆಟ್ಟಿ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ‘ಜೇಮ್ಸ್​’ ಚಿತ್ರದ ಮೇಕಿಂಗ್​ ವಿಡಿಯೋ ಕೂಡ ಸೇರಿಸಲಾಗಿದೆ. ಈ ಸಾಂಗ್​ ನೋಡಿದ ಅಭಿಮಾನಿಗಳು ಕುಣಿದು ಕುಪ್ಪಳಿಸುತ್ತಿದ್ದಾರೆ. ಚೇತನ್​ ಕುಮಾರ್ ನಿರ್ದೇಶನದ ಈ ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟಾಗಿದೆ. ಹಾಗಾದರೆ ಅಭಿಮಾನಿಗಳ ಸಂಭ್ರಮ ಹೇಗಿತ್ತು ಎಂಬುದನ್ನು ನೋಡೋಕೆ ಈ ವಿಡಿಯೋ ವೀಕ್ಷಿಸಿ.

ಇದನ್ನೂ ಓದಿ: ಪ್ರಭಾಸ್​ ಜತೆ ‘ರಾಧೆ ಶ್ಯಾಮ್​’ ಚಿತ್ರತಂಡ ಸೇರಿದ ಶಿವಣ್ಣ; ತೆಲುಗು ಸಿನಿಮಾದಲ್ಲಿ ‘ಸೆಂಚುರಿ ಸ್ಟಾರ್​’ ಕೆಲಸ ಏನು?

ಪುನೀತ್​ ರಾಜ್​ಕುಮಾರ್​ ಹೆಸರಲ್ಲಿ ಉಡಾವಣೆ ಆಗಲಿದೆ ಉಪಗ್ರಹ; ಇದಕ್ಕೆ ತಗಲುತ್ತಿರುವ ವೆಚ್ಚ ಎಷ್ಟು?