ಹಾಸನ: ಕಾರಲ್ಲಿ ಹಣವಿಟ್ಟು ಡೋರ್ ಲಾಕ್ ಮಾಡೋದು ಮರೆತ ವ್ಯಾಪಾರಿ, ಹಣ ಲಪಟಾಯಿಸಿದ ಕಳ್ಳ
ಸುರೇಶ್ ಅಂಗಡಿಯಿಂದ ಹೊರಬಂದು ಕಾರು ಡೋರನ್ನು ಓಪನ್ ಮಾಡಿದಾಗ ಹಣದ ಬ್ಯಾಗ್ ಇಲ್ಲದಿರುವುದು ಗೊತ್ತಾಗಿದೆ. ಕೂಡಲೇ ಅವರು ಅರಸೀಕೆರೆ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಬಂದು ಸಿಸಿಟಿವೊ ಫುಟೇಜ್ ಗಮನಿಸಿದಾಗ ಈ ದೃಶ್ಯ ಕಂಡಿದೆ. ಕಳ್ಳನ ಗುರುತೇನೋ ಪೊಲೀಸರಿಗೆ ಸಿಕ್ಕಿದೆ, ಅದರೆ ಸುರೇಶ್ ಅವರ ವಿವೇಚನೆಹೀನತೆ ಕಂಡು ಅವರಿಗೂ ಆಶ್ಚರ್ಯವಾಗಿರಬಹುದು.
ಹಾಸನ, ಜೂನ್ 9: ಕಳ್ಳರಿಗೆ ನಮ್ಮ ತಿಳಿಗೇಡಿತನ, ಬೇಜವಾಬ್ದಾರಿ ನಡಾವಳಿ ಎಷ್ಟು ನೆರವಾಗುತ್ತೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ ಮಾರಾಯ್ರೇ. ಜಿಲ್ಲೆಯ ಅರಸೀಕೆರೆ ಪಟ್ಟಣದ ಸುಭಾಷ್ನಗರದಲ್ಲಿ ವಾಸವಾಗಿರುವ ತಮಿಳುನಾಡು ಮೂಲದ ಕೊಬ್ಬರಿ ವ್ಯಾಪಾರಿ ಸುರೇಶ್ ಎನ್ನುವವರು ₹ 6.30 ಲಕ್ಷ ಹಣವನ್ನು ಪ್ರಾಯಶಃ ಬ್ಯಾಂಕ್ನಿಂದ ವಿತ್ಡ್ರಾ ಮಾಡಿ ತಮ್ಮ ಅಂಗಡಿಗೆ ಬಂದಿದ್ದಾರೆ. ಅಂಗಡಿಯೊಳಗೆ ಹೋಗಿರುವ ಅವರು ಹಣವನ್ನು ಕಾರಲ್ಲೇ ಇಟ್ಟು ಇಳಿದಿದ್ದಾರೆ. ಅದು ಓಕೆ, ಆದರೆ ಕಾರಿನ ಡೋರ್ ಲಾಕ್ ಮಾಡುವುದನ್ನು ಸುರೇಶ್ ಮರೆತಿದ್ದಾರೆ. ಅವರ ಚಲನವಲನಗಳನ್ನು ಗಮನಿಸುತ್ತಿದ್ದ ಕಳ್ಳ ಮೊಬೈಲ್ ಫೋನಲ್ಲಿ ಮಾತಾಡುತ್ತಿರುವಂತೆ ನಟಿಸಿ ಅನಾಮತ್ತಾಗಿ ಹಣದ ಚೀಲ ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಹತ್ಯೆಗೈದು ಎಲ್ಲರ ಮುಂದೆ ನಾಟಕವಾಡಿದ್ದ ಆರೋಪಿಗಳು ಸಿಕ್ಕಿಬಿದ್ದಿದ್ದೇಗೆ?
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಬಿಗ್ ಬಾಸ್ ಫಿನಾಲೆ: ಗಿಲ್ಲಿ ಗೆಲ್ಲಲಿ ಎಂದು ವಿಶೇಷ ಪೂಜೆ ಮಾಡಿಸಿದ ಫ್ಯಾನ್ಸ್
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ

