ಮೈಸೂರಲ್ಲಿ ನೂರಾರು ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಜನರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರು ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು. ಅವರೊಂದಿಗೆ ಕೊಂಚ ದೂರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ನಿಂತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಕನ್ನಡಿಗರಿಗೆ ಜನಂದಣಿ, ಕ್ರೌಡುಗಳನ್ನು ನೋಡಿದರೆ ಹೆದರಿಕೆಯಾಗುತ್ತಿದೆ, ಅದರೆ ನಮ್ಮ ಜನಪ್ರತಿನಿಧಿಗಳಿಗೆ ಆಗುತ್ತಿಲ್ಲ.
ಮೈಸೂರು, ಜೂನ್ 9: ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಲ್ಲಿದ್ದಾರೆ. ನಗರದಲ್ಲಿರುವ ತಮ್ಮ ಮನೆಯಲ್ಲಿ ಸಿಎಂ ಇದ್ದಾರೆಂದು ಗೊತ್ತಾದ ಕೂಡಲೇ ಜನ ತಮ್ಮ ಅಹವಾಲು ದೂರು-ದುಮ್ಮಾನುಗಳನ್ನು ಹೇಳಿಕೊಳ್ಳಲು ಮನೆ ಬಳಿಗೆ ಮನವಿ ಪತ್ರಗಳೊಂದಿಗೆ ಓಡೋಡಿ ಬಂದರು. ಸಿದ್ದರಾಮಯ್ಯ ತಾಳ್ಮೆ ಕಳೆದುಕೊಳ್ಳದೆ ಎಲ್ಲರಿಂದ ಅಹವಾಲುಗಳನ್ನು ಸ್ವೀಕರಿಸಿದರು. ಕೆಲವರು ತಮ್ಮ ಸಮಸ್ಯೆಗಳನ್ನು ಮೌಖಿಕವಾಗಿ ಹೇಳಿಕೊಳ್ಳಲು, ಅರ್ಜಿಗಳಿಲ್ಲದೆ ಬಂದಿದ್ದರು. ಅವರಲ್ಲೊಬ್ಬರು ಪ್ರಾಯಶಃ ತಮ್ಮ ಮಗನಿಗಾಗಿ ನೌಕರಿ ಕೇಳಿಕೊಂಡು ಬಂದಿದ್ದರು. ಸಿಎಂ ನೌಕರಿ ಕೊಡಿಸುವ ಭರವಸೆ ನೀಡುತ್ತಾರಾದರೂ ಇಂಥದ್ದೇ ಸ್ಥಳದಲ್ಲಿ ಕೆಲಸ ಕೇಳಬೇಡವೆಂದು ಆ ವ್ಯಕ್ತಿಗೆ ತಾಕೀತು ಮಾಡಿದರು.
ಇದನ್ನೂ ಓದಿ: Bengaluru Stampede: ಪೊಲೀಸರು ಯಾಕೆ ಬಲಿಪಶು ಅಂತ ಕೇಳಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಸಂಮಜಸ ಉತ್ತರ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ