ಮಳೆ ಅವಾಂತರ: ನೆಲಮಂಗಲ, ತುಮಕೂರು ರಸ್ತೆಯಲ್ಲಿ ಭಾರೀ ಮಳೆಯಿಂದ ವಾಹನ ಸಂಚಾರ ಅಸ್ತವ್ಯಸ್ತ

|

Updated on: May 10, 2024 | 7:24 PM

ಕೆಲವೆಡೆ ರಸ್ತೆಗಳು ಭಾಗಶಃ ಬ್ಲಾಕ್ ಆಗಿದ್ದರೆ ಬೇರೆ ಕಡೆಗಳಲ್ಲಿ ಟ್ರಾಫಿಕ್ ಆಮೆ ಗತಿಯಲ್ಲಿ ಮುಂದೆ ಸಾಗುತ್ತಿದೆ. 8ನೇ ಮೈಲಿಯ ನವಯುಗ ಟೋಲ್ ಪ್ಲಾಜಾದಿಂದ ಮಾದವಾರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಇನ್ನೆರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಮುನ್ಸೂಚನೆ ಇದೆ. ಮಳೆಗಾಲದಲ್ಲಿ ‘ನಮ್ಮ ಬೆಂಗಳೂರು’ ಸ್ಥಿತಿ ಏನಾಗುತ್ತದೆ ಅಂತ ನಿಮಗೆ ಗೊತ್ತಿಲ್ಲದೇನಿಲ್ಲ.

ಬೆಂಗಳೂರು: ನೀವು ಬೆಂಗಳೂರು ನಿವಾಸಿಯಾಗಿದ್ದು (Bengaluru resident) ಆಫೀಸ್ ನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿರುವಿರಾದರೆ ಮತ್ತು ನಿಮ್ಮ ಮನೆ ಪೀಣ್ಯ, ದಾಸರಹಳ್ಳಿ (Dsarahalli), ಮಲ್ಲಸಂದ್ರ, ಮಾಕಳಿ ಅಥವಾ ಚಿಕ್ಕಬಿದರಕಲ್ಲು (Chikkabidarkallu) ಮೊದಲಾದ ಪ್ರದೇಶಗಳಲ್ಲಿದ್ದರೆ, ನಿಮ್ಮ ಎಂದಿನ ರಸ್ತೆ ಬಿಟ್ಟು ಪರ್ಯಾಯ ರಸ್ತೆಯಿಂದ ತೆರಳಿ ಮನೆ ಸೇರಿಕೊಳ್ಳುವುದು ವಾಸಿ. ಯಾಕೆ ಅಂತ ನಿಮಗೆ ದೃಶ್ಯಗಳಲ್ಲಿ ಕಾಣಿಸುತ್ತಿದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ನೆಲಮಂಗಲ, ತುಮಕೂರು ರಸ್ತೆಯಲ್ಲಿ ಮಳೆ ಸುರಿಯುತ್ತಿದೆ ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ಕೆಲವೆಡೆ ರಸ್ತೆಗಳು ಭಾಗಶಃ ಬ್ಲಾಕ್ ಆಗಿದ್ದರೆ ಬೇರೆ ಕಡೆಗಳಲ್ಲಿ ಟ್ರಾಫಿಕ್ ಆಮೆ ಗತಿಯಲ್ಲಿ ಮುಂದೆ ಸಾಗುತ್ತಿದೆ. 8ನೇ ಮೈಲಿಯ ನವಯುಗ ಟೋಲ್ ಪ್ಲಾಜಾದಿಂದ ಮಾದವಾರದವರೆಗೆ ಟ್ರಾಫಿಕ್ ಜಾಮ್ ಆಗಿದೆ. ಇನ್ನೆರಡು ದಿನ ನಗರದಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಮುನ್ಸೂಚನೆ ಇದೆ. ಮಳೆಗಾಲದಲ್ಲಿ ‘ನಮ್ಮ ಬೆಂಗಳೂರು’ ಸ್ಥಿತಿ ಏನಾಗುತ್ತದೆ ಅಂತ ನಿಮಗೆ ಗೊತ್ತಿಲ್ಲದೇನಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಬೆಂಗಳೂರಲ್ಲಿ ಬೇಸಿಗೆಯ ಅಕಾಲಿಕ ಮಳೆಗೆ ತಲೆಯೆತ್ತಿದ ಅದೇ ಹಳೆಯ ಸಮಸ್ಯೆ, ಮನೆಗಳಿಗೆ ನುಗ್ಗಿದ ಕೊಳಚೆ ನೀರು!