ಸರ್ಜಾಪುರ ರಸ್ತೆಯಲ್ಲಿ ವಾಹನ ಸವಾರರು ಅನುಭವಿಸುತ್ತಿರುವ ಬವಣೆ; ಒಂದು ಪ್ರತ್ಯಕ್ಷ ವಿಡಿಯೋ ವರದಿ
ವಿಜಯನಗರದಿಂದ ಸರ್ಜಾಪುರ ಬರುವ ವ್ಯಕ್ತಿಯೊಬ್ಬರು ಇಂಧನದ ಜೊತೆ ಸಮಯ ಕೂಡ ವ್ಯರ್ಥವಾಗುತ್ತದೆ ಎಂದು ವರದಿಗಾರನಿಗೆ ಹೇಳಿದ್ದಾರೆ. ಇಂಧನ ಉಳಿಸುವ ದೃಷ್ಟಿಯಿಂದ ಅವರು ಫ್ಯುಯೆಲ್ ವಾಹನದ ಬದಲು ಎಲೆಕ್ಟ್ರಿಕ್ ವಾಹನ ಬಳಸಲಾರಂಭಿಸಿದ್ದಾರೆ. ಗ್ರೇಟರ್ ಬೆಂಗಳೂರು ಮತ್ತು ಬ್ರ್ಯಾಂಡ್ ಬೆಂಗಳೂರು ಪದಗಳು ಕೇಳಿಸಿಕೊಳ್ಳಲು ಚಂದ ಅನಿಸುತ್ತವೆ, ಅದರೆ ನಗರದ ವಾಸ್ತವಾಂಶ ಭಿನ್ನವಾಗಿದೆ.
ಬೆಂಗಳೂರು, ಜುಲೈ 17: ಸರ್ಜಾಪುರ ನಗರದ ಪಾಶ್ ಏರಿಯಾಗಳಲ್ಲಿ ಒಂದು. ಆದರೆ ಸರ್ಜಾಪುರ ಜಂಕ್ಷನ್ ಮಾತ್ರ ನಗರದ ನಿವಾಸಿಗಳಿಗೆ ಒಂದು ದುಸ್ವಪ್ನವಲ್ಲದೆ ಮತ್ತೇನೂ ಅಲ್ಲ. ಇತ್ತೀಚಿಗೆ ಸರ್ಜಾಪುರ ರಸ್ತೆಯ (Sarjapur road) ಮೂಲಕ ತನ್ನ ಕಚೇರಿಗೆ ಹೋಗುವ ಟೆಕ್ಕಿಯೊಬ್ಬರು ಟ್ರಾಫಿಕ್ಕಲ್ಲಿ ತಾವು ಅನುಭವಿಸುವ ಯಾತನೆಯ ವಿಡಿಯೋವನ್ನು ಸೋಶಿಯಲ್ ಮಿಡಿಯಾವೊಂದರಲ್ಲಿ ಶೇರ್ ಮಾಡಿದ್ದು ಅದು ವೈರಲ್ ಆಗಿದೆ. ನಮ್ಮ ಬೆಂಗಳೂರು ವರದಿಗಾರ ಸ್ಥಳಕ್ಕೆ ತೆರಳಿ ಫರ್ಸ್ಟ್ ಹ್ಯಾಂಡ್ ಮಾಹಿತಿಯನ್ನು ನೀಡಿದ್ದಾರೆ. ಸರ್ಜಾಪುರ ಜಂಕ್ಷನ್ನಿಂದ ಪಣತ್ತೂರುಗೆ ಇರುವ ಅಂತರ ಸುಮಾರು 3 ಕಿಮೀ, ಅದರೆ ಅಷ್ಟು ಅಂತರವನ್ನು ಕ್ರಮಿಸಲು ಸುಮಾರು 8 ಕಿಮೀ ಕ್ರಮಿಸಲು ಬೇಕಾಗುವಷ್ಟು ಇಂಧನವನ್ನು ವ್ಯಯಿಸಬೇಕಾಗುತ್ತದೆ ಅಂತ ನಿಯಮಿತವಾಗಿ ಈ ರಸ್ತೆಯಲ್ಲಿ ಸಂಚರಿಸುವ ಟೆಕ್ಕಿಯೊಬ್ಬರು ಹೇಳಿದ್ದಾರಂತೆ.
ಇದನ್ನೂ ಓದಿ: ಬೆಂಗಳೂರು ಸುರಂಗ ಮಾರ್ಗ: ಯೋಜನಾ ವರದಿಗೇ ಬೇಕು ಬರೋಬ್ಬರಿ 9.45 ಕೋಟಿ ರೂ!
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ