ಕೊಡಗಿನ ಕೆಲಭಾಗಗಳಲ್ಲಿ ಕಳೆದ ರಾತ್ರಿ ಮತ್ತೇ ಭೂಕಂಪ, ವಾರದಲ್ಲಿ ಇದು 5ನೇ ಸಲ, ಆತಂಕದಲ್ಲಿ ಜನ
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಿಲ್ಲೆಯ ಚೆಂಬು, ಪೆರಾಜೆ, ಕರಿಕೆ, ಸಂಪಾಜೆ ಮೊದಲಾದ ಕಡೆ ಭೂಕಂಪನ ಅನುಭವವಾಯಿತೆಂದು ಜನ ಹೇಳುತ್ತಿದ್ದಾರೆ. ಮತ್ತೊಬ್ಬರು ಭೂಕಂಪನ ಅಗಿರುವುದನ್ನು ಲ್ಯಾಪ್ ಟಾಪ್ ನಲ್ಲಿ ತೋರಿಸುತ್ತಿದ್ದಾರೆ.
bಕೊಡಗು (Coorg) ಜಿಲ್ಲೆಯಲ್ಲಿ ಏನಾಗುತ್ತಿದೆ ಅಂತ ಅರ್ಥವಾಗುತ್ತಿಲ್ಲ ಮಾರಾಯ್ರೇ. ಕಳೆದೊಂದು ವಾರದ ಅವಧಿಯಲ್ಲಿ 5 ಬಾರಿ ಭೂಕಂಪವಾಗಿದೆ. ಕಳೆದ ರಾತ್ರಿ ಸುಮಾರು 1.12 ಗಂಟೆಗೆ ಭೂಕಂಪನದ (tremors) ಅನುಭವವಾಯಿತು ಎಂದು ಚೆಂಬು (Chembu) ಭಾಗದ ನಿವಾಸಿಯೊಬ್ಬರು ಹೇಳುತ್ತಿದ್ದಾರೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಜಿಲ್ಲೆಯ ಚೆಂಬು, ಪೆರಾಜೆ, ಕರಿಕೆ, ಸಂಪಾಜೆ ಮೊದಲಾದ ಕಡೆ ಭೂಕಂಪನ ಅನುಭವವಾಯಿತೆಂದು ಜನ ಹೇಳುತ್ತಿದ್ದಾರೆ. ಮತ್ತೊಬ್ಬರು ಭೂಕಂಪನ ಅಗಿರುವುದನ್ನು ಲ್ಯಾಪ್ ಟಾಪ್ ನಲ್ಲಿ ತೋರಿಸುತ್ತಿದ್ದಾರೆ. ಪದೇಪದೆ ಹೆಚ್ಚು ಕಡಿಮೆ ಪ್ರತಿದಿನ ಭೂಕಂಪ ಆಗುತ್ತಿರುವುದರಿಂದ ಈ ಭಾಗದ ಜನ ಆತಂಕಕ್ಕೊಳಗಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತು ಸಂಪಾಜೆಯಲ್ಲಿ ಭೂಮಿ ಅದುರಿದೆ.
ಇದನ್ನೂ ಓದಿ: Viral Video: ಹರಿದ್ವಾರದ ಸೇತುವೆಯಿಂದ ಗಂಗಾ ನದಿಗೆ ಧುಮುಕಿದ 70ರ ವೃದ್ಧೆ; ಅಜ್ಜಿಯ ಧೈರ್ಯಕ್ಕೆ ನೆಟ್ಟಿಗರು ಶಾಕ್
Published on: Jul 01, 2022 03:44 PM