Viral Video: ಬಿಯರ್ ಬಾಟಲಿಯೊಳಗೆ ಸಿಲುಕಿ 3 ಗಂಟೆ ಒದ್ದಾಡಿದ ಹಾವು
ರಸ್ತೆಯಲ್ಲಿ ಬಿದ್ದಿದ್ದ ಬಿಯರ್ ಬಾಟಲಿಯೊಳಗೆ ಅಚಾನಕ್ಕಾಗಿ ಹಾವಿನ ತಲೆ ಸಿಲುಕಿಕೊಂಡಿದೆ. ಅದರಿಂದ ತನ್ನ ತಲೆಯನ್ನು ಹೊರತೆಗೆಯಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಹಾವಿಗೆ ನೆರವಾಗಲು ಕೆಲವು ದಾರಿಹೋಕರು ಪ್ರಯತ್ನಿಸಿದ್ದಾರೆ. ಆದರೆ, ಒದ್ದಾಡುತ್ತಾ ಎಲ್ಲೆಂದರಲ್ಲಿ ಹೋಗುತ್ತಿದ್ದ ಹಾವನ್ನು ಕಂಡು ಗಾಬರಿಯಾಗಿ ದೂರ ಸರಿದಿದ್ದಾರೆ.
ಹೈದರಾಬಾದ್: ತೆಲಂಗಾಣದ ಜಗಿತ್ಯಾಲ್ ಜಿಲ್ಲೆಯಲ್ಲಿ ಪೊದೆಗಳಿರುವ ನಿರ್ಜನ ರಸ್ತೆಯಲ್ಲಿ ಹಾವು ಬಿಯರ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದಿರುವ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಕುಡಿದು ಬಿಸಾಡಿದ್ದ ಬಿಯರ್ ಬಾಟಲಿಯೊಳಗೆ ಹಾವಿನ ತಲೆ ಸಿಲುಕಿತ್ತು. ಅದು ತನ್ನನ್ನು ಬಿಡಿಸಿಕೊಳ್ಳಲು ಮತ್ತು ಡಬ್ಬಿಯಿಂದ ತನ್ನ ತಲೆಯನ್ನು ತೆಗೆಯಲು ಕಷ್ಟಪಟ್ಟು ಪ್ರಯತ್ನಿಸಿತು. ಮೂರು ಗಂಟೆಗಳ ಸುದೀರ್ಘ ಹೋರಾಟದ ನಂತರ ಕೊನೆಗೂ ಅದು ತನ್ನನ್ನು ರಕ್ಷಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ