ಮೋಕ್ಷಿತಾ ಜೊತೆ ಮನಸ್ಸಿನ ಮಾತು ವಿನಿಮಯ ಮಾಡಿಕೊಂಡ ತ್ರಿವಿಕ್ರಮ್
ಬಿಗ್ ಬಾಸ್ ಆಟದಲ್ಲಿ ಯುವ ಜೋಡಿಗಳ ನಡುವೆ ಆಕರ್ಷಣೆ ಹುಟ್ಟುತ್ತದೆ. ಇಷ್ಟು ದಿನಗಳ ಕಾಲ ಸುಮ್ಮನಿದ್ದ ತ್ರಿವಿಕ್ರಮ್ ಅವರು ಈಗ ಮೋಕ್ಷಿತಾ ಎದುರು ತಮ್ಮ ಮನಸ್ಸಿನ ಮಾತು ಹೇಳಿಕೊಂಡಿದ್ದಾರೆ. ಅದೇ ರೀತಿ ಮೋಕ್ಷಿತಾ ಅವರು ಕೂಡ ತಮ್ಮ ಅನಿಸಿಕೆಗಳನ್ನು ನೇರವಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಬ್ಬರ ನಡುವಿನ ಬಂಧ ಗಟ್ಟಿಯಾಗುವ ಸಾಧ್ಯತೆ ಇದೆ.
‘ನಾನು ನಿಮ್ಮ ಜೊತೆ ಮಾತನಾಡಬೇಕು’ ಎಂದು ಮೋಕ್ಷಿತಾ ಜೊತೆ ತ್ರಿವಿಕ್ರಮ್ ಅವರು ಮಾತುಕಥೆ ಆರಂಭಿಸಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶುರು ಆದಾಗಿನಿಂದ ಮೋಕ್ಷಿತಾ ಮತ್ತು ತ್ರಿವಿಕ್ರಮ್ ಅವರು ಹೆಚ್ಚು ಬೆರೆತಿಲ್ಲ. ಈಗ ಮೋಕ್ಷಿತಾ ಜೊತೆ ಹತ್ತಿರ ಆಗಬೇಕು ಎಂದು ತ್ರಿವಿಕ್ರಮ್ ಬಯಸಿದ್ದಾರೆ. ‘ನಿಮ್ಮ ವಿಷಯದಲ್ಲಿ ನನಗೆ ತುಂಬ ಗೊಂದಲ ಇದೆ. ಈ ವ್ಯಕ್ತಿ ಹೇಗೆ? ಓಕೆನಾ ಅಥವಾ ಇಲ್ಲವಾ ಎಂಬುದು ಗೊತ್ತಾಗಿಲ್ಲ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ. ‘ನಾವಿಬ್ಬರೂ ಇನ್ನೂ ಕುಳಿತು ಮಾತನಾಡಿಲ್ಲ’ ಎಂದು ತ್ರಿವಿಕ್ರಮ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos