ಒಂದು ಗಂಟೆಯ ಮ್ಯಾಜಿಕ್, ವಿದ್ಯಾರ್ಥಿನಿಯರ ಬಳಿ ಅಂಗಡಿ ನೋಡಿಕೊಳ್ಳಿ ಎಂದು ಹೇಳಿ ಹೋದ ಮಾಲೀಕ, ಆಮೇಲೇನಾಯ್ತು?

Updated on: Apr 19, 2026 | 8:21 AM

ವಿಯೆಟ್ನಾಂನ ಒಂದು ಜನನಿಬಿಡ ರಸ್ತೆಯಲ್ಲಿ ಆ ಬೀದಿ ವ್ಯಾಪಾರಿ ಪ್ರತಿದಿನ ಬೆವರು ಸುರಿಸಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಅದು ಅವನ ಬದುಕಿನ ಏಕೈಕ ಆಧಾರವಾಗಿತ್ತು. ಆದರೆ ಒಂದು ದಿನ ಅವನಿಗೆ ಅನಿರೀಕ್ಷಿತವಾಗಿ ಒಂದು ತುರ್ತು ಕೆಲಸ ಎದುರಾಯಿತು. ಅಂಗಡಿಯನ್ನು ಹಾಗೆಯೇ ಬಿಟ್ಟು ಹೋಗುವಂತಿರಲಿಲ್ಲ, ಮುಚ್ಚಿದರೆ ಅಂದಿನ ಸಂಪಾದನೆಗೆ ಪೆಟ್ಟು ಬೀಳುತ್ತಿತ್ತು. ಅಂಗಡಿಯ ಹತ್ತಿರವೇ ನಿಂತಿದ್ದ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಕಂಡ ಆ ವ್ಯಾಪಾರಿ, "ಮಕ್ಕಳೇ, ಒಂದು ತುರ್ತು ಪರಿಸ್ಥಿತಿ ಇದೆ, ದಯವಿಟ್ಟು ಒಂದು ಗಂಟೆ ಕಾಲ ನನ್ನ ಅಂಗಡಿ ನೋಡಿಕೊಳ್ಳುತ್ತೀರಾ ಎಂದು ವಿನಂತಿಸಿದ. ಆ ಮುಗ್ಧ ಹುಡುಗಿಯರು ನಗುನಗುತ್ತಲೇ ಒಪ್ಪಿಕೊಂಡರು. ವ್ಯಾಪಾರಿ ನಿಶ್ಚಿಂತೆಯಿಂದ ತನ್ನ ಕೆಲಸಕ್ಕೆ ಧಾವಿಸಿದ.

ಹನೋಯ್, ಏಪ್ರಿಲ್ 19: ವಿಯೆಟ್ನಾಂನ ಒಂದು ಜನನಿಬಿಡ ರಸ್ತೆಯಲ್ಲಿ ಆ ಬೀದಿ ವ್ಯಾಪಾರಿ ಪ್ರತಿದಿನ ಬೆವರು ಸುರಿಸಿ ಸಣ್ಣಪುಟ್ಟ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಅದು ಅವನ ಬದುಕಿನ ಏಕೈಕ ಆಧಾರವಾಗಿತ್ತು. ಆದರೆ ಒಂದು ದಿನ ಅವನಿಗೆ ಅನಿರೀಕ್ಷಿತವಾಗಿ ಒಂದು ತುರ್ತು ಕೆಲಸ ಎದುರಾಯಿತು. ಅಂಗಡಿಯನ್ನು ಹಾಗೆಯೇ ಬಿಟ್ಟು ಹೋಗುವಂತಿರಲಿಲ್ಲ, ಮುಚ್ಚಿದರೆ ಅಂದಿನ ಸಂಪಾದನೆಗೆ ಪೆಟ್ಟು ಬೀಳುತ್ತಿತ್ತು. ಅಂಗಡಿಯ ಹತ್ತಿರವೇ ನಿಂತಿದ್ದ ಇಬ್ಬರು ಪ್ರೌಢಶಾಲಾ ವಿದ್ಯಾರ್ಥಿನಿಯರನ್ನು ಕಂಡ ಆ ವ್ಯಾಪಾರಿ, “ಮಕ್ಕಳೇ, ಒಂದು ತುರ್ತು ಪರಿಸ್ಥಿತಿ ಇದೆ, ದಯವಿಟ್ಟು ಒಂದು ಗಂಟೆ ಕಾಲ ನನ್ನ ಅಂಗಡಿ ನೋಡಿಕೊಳ್ಳುತ್ತೀರಾ ಎಂದು ವಿನಂತಿಸಿದ. ಆ ಮುಗ್ಧ ಹುಡುಗಿಯರು ನಗುನಗುತ್ತಲೇ ಒಪ್ಪಿಕೊಂಡರು. ವ್ಯಾಪಾರಿ ನಿಶ್ಚಿಂತೆಯಿಂದ ತನ್ನ ಕೆಲಸಕ್ಕೆ  ಹೋಗಿದ್ದರು.

ಸರಿಯಾಗಿ ಒಂದು ಗಂಟೆಯ ನಂತರ ವ್ಯಾಪಾರಿ ಸಂಭ್ರಮ ಮತ್ತು ಆತಂಕದ ನಡುವೆ ತನ್ನ ಅಂಗಡಿಗೆ ಓಡಿ ಬಂದ. ಆದರೆ ಅಲ್ಲಿ ಅವನು ಕಂಡ ದೃಶ್ಯ ಅವನನ್ನು ದಿಗ್ಭ್ರಮೆಗೊಳಿಸಿತು, ಅವನ ಅಂಗಡಿಯಲ್ಲಿದ್ದ ಪ್ರತಿಯೊಂದು ವಸ್ತುವೂ ಮಾರಾಟವಾಗಿತ್ತು. ಸಾಮಾನ್ಯವಾಗಿ ಆತ ಇಡೀ ದಿನ ಕುಳಿತು ಮಾರಾಟ ಮಾಡುತ್ತಿದ್ದ ಎಲ್ಲ ಉತ್ಪನ್ನಗಳು ಕೇವಲ 60 ನಿಮಿಷಗಳಲ್ಲಿ ಖಾಲಿಯಾಗಿದ್ದವು.

ವ್ಯಾಪಾರಿಗೆ ತನ್ನ ಕಣ್ಣುಗಳನ್ನು ತಾನೇ ನಂಬಲು ಸಾಧ್ಯವಾಗಲಿಲ್ಲ. ಆ ಹುಡುಗಿಯರು ಸುಮ್ಮನೆ ಕುಳಿತುಕೊಳ್ಳುವ ಬದಲು, ಇಂದಿನ ಕಾಲದ ಮಾರುಕಟ್ಟೆ ತಂತ್ರಗಳನ್ನು ಬಳಸಿದ್ದರು. ಅವರು ರಸ್ತೆಯಲ್ಲಿ ಹೋಗುವವರನ್ನು ಆತ್ಮೀಯವಾಗಿ ಮಾತನಾಡಿಸಿ, ವಸ್ತುಗಳ ವಿಶೇಷತೆಯನ್ನು ವಿವರಿಸಿ, ಅತ್ಯಂತ ಲವಲವಿಕೆಯಿಂದ ವ್ಯಾಪಾರ ಮಾಡಿದ್ದರು. ಶಾಲಾ ಬಾಲಕಿಯರ ಆ ಉತ್ಸಾಹ ಮತ್ತು ಪ್ರಾಮಾಣಿಕತೆಯನ್ನು ಕಂಡ ಜನರು ಖುಷಿಯಿಂದ ವಸ್ತುಗಳನ್ನು ಖರೀದಿಸಿದ್ದರು.

ಖಾಲಿಯಾದ ಬುಟ್ಟಿಗಳು ಮತ್ತು ಕೈಯಲ್ಲಿದ್ದ ಹಣವನ್ನು ನೋಡಿದ ಆ ವ್ಯಕ್ತಿ ದಂಗಾಗಿ ಹೋದ. ಒಂದು ಗಂಟೆಯ ಮೊದಲು ತಾನು ಅಸಹಾಯಕನಾಗಿ ನೋಡುತ್ತಿದ್ದ ವ್ಯಾಪಾರಿಗೆ ಈಗ ಅನಿರೀಕ್ಷಿತ ಲಾಭ ಸಿಕ್ಕಿತ್ತು. ಆ ಹುಡುಗಿಯರ ಸಮಯಪ್ರಜ್ಞೆ ಮತ್ತು ಸಹಾಯ ಮನೋಭಾವವನ್ನು ಕಂಡು ಅವನ ಕಣ್ಣಾಲಿಗಳು ತುಂಬಿ ಬಂದವು. ಕೇವಲ ಒಂದು ಗಂಟೆಯಲ್ಲಿ ಅವರು ಅವನ ಒಂದು ದಿನದ ಕಷ್ಟವನ್ನು ಸುಲಭವಾಗಿಸಿದ್ದರು.

ಈ ಕಥೆಯು ನಮಗೆ ಎರಡು ಪಾಠಗಳನ್ನು ಕಲಿಸುತ್ತದೆ: ಮೊದಲನೆಯದು, ನಂಬಿಕೆಯೇ ಪ್ರಪಂಚದ ಅತಿ ದೊಡ್ಡ ಶಕ್ತಿ. ಎರಡನೆಯದು, ನಾವು ಯುವ ಪೀಳಿಗೆಗೆ ಅವಕಾಶ ನೀಡಿದರೆ ಅವರು ತಮ್ಮ ಕೌಶಲ್ಯದಿಂದ ಅದ್ಭುತಗಳನ್ನೇ ಸೃಷ್ಟಿಸಬಲ್ಲರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More