ನಟ್ಟು ಬೋಲ್ಟು ಹೇಳಿಕೆ: ಡಿಕೆ ಶಿವಕುಮಾರ್ ಬಳಸಿದ ಭಾಷೆ ಸರಿ ಇಲ್ಲ ಎಂದ ನಾಗಾಭರಣ
ಡಿಕೆ ಶಿವಕುಮಾರ್ ನೀಡಿದ್ದ ನಟ್ಟು ಬೋಲ್ಟು ಹೇಳಿಕೆಗೆ ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಪ್ರತಿಕ್ರಿಯಿಸಿದ್ದಾರೆ. ‘ಚಿತ್ರೋತ್ಸವಕ್ಕೆ ಎಲ್ಲರನ್ನೂ ಕರೆಯಬೇಕು. ಕಲಾವಿದರಿಗೂ ಏನೇನೋ ತಾಪತ್ರಯಗಳು ಇರುತ್ತವೆ. ಬರಲಿಲ್ಲ ಎಂದಮಾತ್ರಕ್ಕೆ ಅವರೆಲ್ಲ ಏನೋ ತಪ್ಪು ಮಾಡಿದ್ದಾರೆ ಅಂತ ಹೇಳೋಕೆ ಆಗಲ್ಲ’ ಎಂದು ಟಿ.ಎಸ್. ನಾಗಾಭರಣ ಅವರು ಹೇಳಿದ್ದಾರೆ.
ಚಿತ್ರರಂಗದ ನಟ್ಟು ಬೋಲ್ಟು ಟೈಟ್ ಮಾಡುವುದು ಹೇಗೆ ಅಂತ ತಮಗೆ ಗೊತ್ತು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದರ ಬಗ್ಗೆ ಚರ್ಚೆ ನಡೆಯುತ್ತಿದೆ. ಹಿರಿಯ ನಿರ್ದೇಶಕ ನಾಗಾಭರಣ ಅವರು ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ‘ಎಲ್ಲಕ್ಕಿಂತ ಮುಖ್ಯವಾಗಿ ಅವರು ಬಳಸಿದ ಪದಗಳು ಸರಿಯಿಲ್ಲ. ಅದು ಯಾವ ಸಂಸ್ಕಾರದಿಂದ ಬಂದಿದೆಯೋ ಆ ಸಂಸ್ಕಾರಕ್ಕೆ ಒಗ್ಗಿಹೋಗಿರೋದರಿಂದ ನಾವು ಅದನ್ನು ಒಂದು ದುರಾದೃಷ್ಟ ಅಂತ ಅಂದುಕೊಳ್ಳಬೇಕು ಅಷ್ಟೇ. ನಾನು ಆ ರೀತಿಯ ಮಾತುಗಳನ್ನು ಆಡುವುದಿಲ್ಲ’ ಎಂದು ನಾಗಾಭರಣ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.