‘ನನ್ನ ವಿಚಾರಕ್ಕೆ ಬರಲೇಬೇಡಮ್ಮ’; ಏಕಾಏಕಿ ಸಂಗೀತಾ ವಿರುದ್ಧ ಸಿಡಿದೆದ್ದ ತುಕಾಲಿ ಸಂತೋಷ್

|

Updated on: Dec 01, 2023 | 2:25 PM

‘ನನ್ನ ಸುದ್ದಿಗೆ ನೀನು ಬರೋದು ಬೇಡ’ ಎಂದು ತುಕಾಲಿ ಸಂತೋಷ್ ಅವರು ಈ ಮೊದಲು ಸಂಗೀತಾಗೆ ಎಚ್ಚರಿಕೆ ನೀಡಿದ್ದರು. ಈಗ ಈ ವಿಚಾರದಲ್ಲಿ ತುಕಾಲಿ ಮತ್ತೆ ಸಿಡಿದೆದ್ದಿದ್ದಾರೆ.

ಸಂಗೀತಾ ಶೃಂಗೇರಿ (Sangeetha Sringeri) ಹಾಗೂ ತುಕಾಲಿ ಸಂತೋಷ್ ಮಧ್ಯೆ ಯಾವುದೂ ಸರಿ ಇಲ್ಲ. ‘ನನ್ನ ಸುದ್ದಿಗೆ ನೀನು ಬರೋದು ಬೇಡ’ ಎಂದು ಸಂತೋಷ್ ಅವರು ಈಗಾಗಲೇ ಸಂಗೀತಾಗೆ ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಸಂಗೀತಾ ಇದನ್ನು ಗಂಭೀರವಾಗಿ ಸ್ವೀಕರಿಸಿಲ್ಲ. ಇದುವೇ ಅವರಿಗೆ ಮುಳುವಾಗಿದೆ. ಕಳೆದ ವಾರ ವರ್ತೂರು ಸಂತೊಷ್ ಅವರು ಕಳಪೆ ಪಟ್ಟ ಪಡೆದಿದ್ದರು. ಈ ವಾರ ಡ್ರೋನ್ ಪ್ರತಾಪ್​ಗೆ ಕಳಪೆ ಸಿಕ್ಕಿದೆ. ಮುಂದಿನ ವಾರ ಯಾರು ಎನ್ನುವ ಪ್ರಶ್ನೆ ಎದುರಾಗಿದೆ. ಸಂಗೀತಾ ಅವರು ನಗುತ್ತಾ, ‘ತುಕಾಲಿ’ ಎಂದಿದ್ದಾರೆ. ಇದಕ್ಕೆ ತುಕಾಲಿ ಸಂತೋಷ್ ಸಿಟ್ಟಾಗಿದ್ದಾರೆ. ‘ನನ್ನ ವಿಚಾರಕ್ಕೆ ಬರಲೇಬೇಡ. ನನ್ನನ್ನು ಇಗ್ನೋರ್ ಮಾಡಿಬಿಡು’ ಎಂದು ಜೋರು ಧ್ವನಿಯಲ್ಲೇ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ