Daily Devotional: ತುಳಸಿ ತೀರ್ಥದ ಮಹತ್ವ ತಿಳಿಯಿರಿ

Daily Devotional: ತುಳಸಿ ತೀರ್ಥದ ಮಹತ್ವ ತಿಳಿಯಿರಿ

ವಿವೇಕ ಬಿರಾದಾರ
|

Updated on: Dec 17, 2024 | 7:06 AM

ತುಳಸಿ ಹಿಂದೂ ಧರ್ಮದಲ್ಲಿ ಪವಿತ್ರ ಸಸ್ಯವಾಗಿದೆ. ಇದರ ಔಷಧೀಯ ಗುಣಗಳು ಮತ್ತು ಧಾರ್ಮಿಕ ಮಹತ್ವ ಅಪಾರ. ತುಳಸಿ ತೀರ್ಥ ಸೇವನೆಯಿಂದ ಅನೇಕ ಆರೋಗ್ಯ ಮತ್ತು ಧಾರ್ಮಿಕ ಪ್ರಯೋಜನಗಳಿವೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಪ್ರಕಾರ, ತುಳಸಿ ಪೂಜೆಯು ಶನಿ ದೋಷ ನಿವಾರಣೆಗೆ ಸಹಾಯ ಮಾಡುತ್ತದೆ. ಈ ಲೇಖನದಲ್ಲಿ ತುಳಸಿಯ ಪ್ರಾಮುಖ್ಯತೆ ಮತ್ತು ಅದರ ವಿವಿಧ ಉಪಯೋಗಗಳನ್ನು ಚರ್ಚಿಸಲಾಗಿದೆ.

ತುಳಸಿ ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಸಸ್ಯವಾಗಿದೆ. ತುಳಸಿ ತೀರ್ಥವನ್ನು ಸೇವಿಸುವುದರಿಂದ ಹಲವು ಧಾರ್ಮಿಕ, ವೈದ್ಯಕೀಯ ಉಪಯೋಗಗಳಿವೆ.ತುಳಸಿ ಒಂದು ಅರ್ಥದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ತುಳಸಿ ಇರುವಲ್ಲಿ ಮಹಾಲಕ್ಷ್ಮೀ ನೆಲೆಸಿರುತ್ತಾಳೆ ಎನ್ನುತ್ತಾರೆ. ತುಳಸಿ ಪೂಜೆ ಮಾಡುವುದರಿಂದ ಶನಿಕಾಟದಿಂದ ಪಾರಾಗಬಹುದು.ತುಳಸಿ ಗಿಡ ಇರುವ ಜಾಗದಲ್ಲಿ ಬಾಲಗ್ರಹ ಅಥವ ಭೂತಬಾಧೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಅಂತ್ಯ ಕಾಲದಲ್ಲಿ ತುಳಸಿ ತೀರ್ಥ ಸೇವಿಸುವುದರಿಂದ ಉಪಯೋಗವೇನು? ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.