ಹದ್ದುಬಸ್ತಿನಲ್ಲಿರದೆ ಹೋದರೆ ಪಶ್ಚಾತ್ತಾಪ ಪಡಬೇಕಾದೀತೆಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು ತುಮಕೂರಿನ ಎಸ್ ಪಿ ರಾಹುಲ್ ಕುಮಾರ್

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 08, 2022 | 3:20 PM

ರೌಡಿ ಶೀಟರ್ ಗಳಾದ ರೋಹಿತ್, ಬಾಲಾಜಿ, ಚಿದಾನಂದ ಮತ್ತು ಅಜ್ಜು ಮೊದಲಾದವರಿಗೆ ಎಸ್ ಪಿಯವರು ಗೂಂಡಾಗಿರಿಯನ್ನು ನಿಲ್ಲಿಸದೆ ಹೋದರೆ ಬಹಳ ಪಶ್ಚಾತ್ತಾಪ ಪಡಬೇಕಾದೀತು ಅಂತ ಎಚ್ಚರಿಸಿದರು.

ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ (Rahul Kumar) ಅವರು ಖಡಕ್ ಅಧಿಕಾರಿ ಅನ್ನೋದು ಅಲ್ಲಿನ ರೌಡಿಗಳಿಗೆ (history sheeters) ಶುಕ್ರವಾರ ಮತ್ತೊಮ್ಮೆ ಮನದಟ್ಟಾಯಿತು ಮಾರಾಯ್ರೇ. ರೌಡಿ ಶೀಟರ್ ಗಳಾದ ರೋಹಿತ್, ಬಾಲಾಜಿ, ಚಿದಾನಂದ ಮತ್ತು ಅಜ್ಜು ಮೊದಲಾದವರಿಗೆ ಎಸ್ ಪಿಯವರು ಗೂಂಡಾಗಿರಿಯನ್ನು ನಿಲ್ಲಿಸದೆ ಹೋದರೆ ಬಹಳ ಪಶ್ಚಾತ್ತಾಪ ಪಡಬೇಕಾದೀತು ಅಂತ ಎಚ್ಚರಿಸಿದರು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹಣ್ಣಿನ ಅಂಗಡಿಗಳನ್ನು ಇಟ್ಟುಕೊಂಡಿರುವ ಈ ರೌಡಿಗಳು ಪೊಲೀಸರನ್ನೂ ಹೆದರಿಸುವ ಪ್ರಯತ್ನ ಮಾಡಿರುವರಂತೆ.

ಇದನ್ನೂ ಓದಿ:   Viral Video: ಹಲ್ಲಿನ ಮೂಲಕ ಒಟ್ಟಿಗೆ ಐದು ಕಾರುಗಳನ್ನು ಎಳೆದು ವಿಶ್ವ ದಾಖಲೆ ಬರೆದ ಟ್ರಾಯ್ ಕಾನ್ಲೆ ಮ್ಯಾಗ್ನುಸನ್, ವೈರಲ್ ವಿಡಿಯೋ ಇಲ್ಲಿದೆ