ತುಂಗಭದ್ರಾ ಡ್ಯಾಂನ ಹೊಸ ಕ್ರಸ್ಟ್​ ಗೇಟ್​ ನಿರ್ಮಾಣದ ಎಕ್ಸ್​ಕ್ಲೂಸಿವ್​ ದೃಶ್ಯ!

|

Updated on: Aug 12, 2024 | 4:02 PM

ಹೊಸಪೇಟೆ ತುಂಗಾಭದ್ರ ಜಲಾಶಯದ 19ನೇ ಕ್ರಸ್ಟ್​ ಗೇಟ್​ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ ಹೊಸ ಗೇಟ್ ಅಳವಡಿಕೆಗೆ ಸಿದ್ಧತೆ ನಡೆದಿದ್ದು, ಭರ್ತಿಯಾಗಿರುವ ಜಲಾಶಯದ ಅರ್ಧ ನೀರನ್ನು ಖಾಲಿ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಹೊಸ ಕ್ರಸ್ಟ್ ಗೇಟ್​ ಎಲ್ಲಿ ತಯಾರಾಗುತ್ತಿದೆ? ಅಗಲ-ಉದ್ಧ ಎಷ್ಟಿದೆ ಎನ್ನುವ ಎಕ್ಸ್​ಕ್ಲೂಸಿವ್​ ದೃಶ್ಯ ಇಲ್ಲಿದೆ ನೋಡಿ.

ವಿಜಯನಗರ, (ಆಗಸ್ಟ್ 12): ತುಂಗಭದ್ರಾ ಜಲಾಶಯದ (Tungabhadra Dam) ಕ್ರಸ್ಟ್ ಗೇಟ್​ ಕೊಚ್ಚಿಹೋಗಿದ್ದರಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. ಬರದಿಂದ ಕೆಂಗೆಟ್ಟಿದ್ದ ರೈತರು ಈ ಬಾರಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದರಿಂದ ಎರಡು ಬೆಳೆ ತೆಗೆಯಬಹುದು ಎಂದು ಫುಲ್ ಖುಷ್ ಆಗಿದ್ದರು. ಆದ್ರೆ, ಡ್ಯಾಂನ ಕ್ರಸ್ಟ್​ ಗೇಟ್ 19 ಕಟ್​ ಆಗಿದ್ದು, ಇದೀಗ ಅರ್ಧ ನೀರು ಜಲಾಶಯದಿಂದ ಖಾಲಿ ಮಾಡಬೇಕಿದೆ. ಹೀಗಾಗಿ ಜಲಕ್ಷಾಮ ಎದುರಾಗುವ ಆತಂಕ ರೈತರಲ್ಲಿ ಮನೆ ಮಾಡಿದೆ. ಇನ್ನೊಂದೆಡೆ ಹೊಸ ಕ್ರಸ್ಟ್​ ಗೇಟ್ ನಿರ್ಮಾಣ ಕಾರ್ಯ ಸಹ ಭರದಿಂದ ಸಾಗಿದೆ. ​ಹೊಸಪೇಟೆಯ ಇಂಡಸ್ಟ್ರಿಯಲ್ ಏರಿಯಾದ ನಾರಾಯಣ ಇಂಜಿನಿಯರಿಂಗ್ ವರ್ಕ್ಸ್​​ನಲ್ಲಿ ಗೇಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. 19. 230 ಮೀಟರ್ ಉದ್ದ, 1.250 ಮೀಟರ್ ಅಗಲ ಮತ್ತು ದಪ್ಪ ಗಾತ್ರದ ಕಬ್ಬಿಣದ ಗೇಟ್ ನಿರ್ಮಾಣವಾಗುತ್ತಿದ್ದು, 10 ದಿನದೊಳಗೆ ಗೇಟ್ ಅಳವಡಿಸಲು ಪ್ಲ್ಯಾನ್​ ಮಾಡಲಾಗಿದೆ.

ಇದನ್ನೂ ಓದಿ: ಭರದಿಂದ ಸಾಗಿದ ತುಂಗಭದ್ರಾ ಡ್ಯಾಂ ಗೇಟ್​ ನಿರ್ಮಾಣದ ಕಾರ್ಯ: ಗೇಟಿನ ಅಗಲ-ಉದ್ದ ಎಷ್ಟು? ಇಲ್ಲಿದೆ ವಿವರ

Follow us on