Tv9 Education Summit Live: ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್ ಸಮಿಟ್ 2022
ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್ ಸಮಿಟ್ 2022 EDUCATION EXPO ಆಯೋಜಿಸಲಾಗಿದೆ. ದೇಶದ ನಂಬರ್ 1 ನ್ಯೂಸ್ ನೆಟ್‌ವರ್ಕ್ ಟಿವಿ9ನಿಂದ ಆಯೋಜಿಸಲಾದ ಟಿವಿ9 ಎಜುಕೇಷನ್ ಸಮಿಟ್ 2022 ಕುಸುಗಲ್ ರಸ್ತೆಯ ಶ್ರೀನಿವಾಸ್ ಗಾರ್ಡನ್ನಲ್ಲಿ ನಡೆಯುತ್ತಿದೆ.
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ 5ನೇ ಬಾರಿಗೆ ಟಿವಿ9 ಎಜುಕೇಷನ್ ಸಮಿಟ್ 2022 EDUCATION EXPO ಆಯೋಜಿಸಲಾಗಿದೆ. ದೇಶದ ನಂಬರ್ 1 ನ್ಯೂಸ್ ನೆಟ್‌ವರ್ಕ್ ಟಿವಿ9ನಿಂದ ಆಯೋಜಿಸಲಾದ ಟಿವಿ9 ಎಜುಕೇಷನ್ ಸಮಿಟ್ 2022 ಕುಸುಗಲ್ ರಸ್ತೆಯ ಶ್ರೀನಿವಾಸ್ ಗಾರ್ಡನ್ನಲ್ಲಿ ನಡೆಯುತ್ತಿದೆ. ಎಜುಕೇಷನ್ ಸಮಿಟ್ ಇಂದು ಹಾಗೂ ನಾಳೆ ಎರಡು ದಿನಗಳ ಕಾಲ ನಡೆಯಲಿದೆ ಎಜುಕೇಷನ್ ಸಮಿಟ್ಗೆ ಹು-ಧಾ ಪಾಲಿಕೆ ಆಯುಕ್ತ ಡಾ.ಗೋಪಾಲಕೃಷ್ಣ ಚಾಲನೆ ನೀಡಿದ್ದಾರೆ. ದೇಶ, ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಸಮಿಟ್ನಲ್ಲಿ ಭಾಗವಹಿಸಲಿದೆ. ಎಜುಕೇಷನ್ ಸಮಿಟ್ನಲ್ಲಿ 40ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗಿಯಾಗುತ್ತಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎರಡು ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಚೆನ್ನಮ್ಮ ವೃತ್ತದಿಂದ ಶ್ರೀನಿವಾಸ್ ಗಾರ್ಡನ್ವರೆಗೂ ಬಸ್ ವ್ಯವಸ್ಥೆ ಮಾಡಲಾಗಿದೆ.
Published on: Jul 02, 2022 12:29 PM