Watch it Live: ಎಳೆ ಪ್ರಾಯದಲ್ಲೇ ಪುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಅಭಿಯಾನ ಆರಂಭಿಸಿದ ಟಿವಿ9 ನೆಟ್ವರ್ಕ್

Watch it Live: ಎಳೆ ಪ್ರಾಯದಲ್ಲೇ ಪುಟ್ಬಾಲ್ ಪ್ರತಿಭೆಗಳನ್ನು ಗುರುತಿಸಿ ತರಬೇತಿ ನೀಡುವ ಅಭಿಯಾನ ಆರಂಭಿಸಿದ ಟಿವಿ9 ನೆಟ್ವರ್ಕ್

ಅರುಣ್​ ಕುಮಾರ್​ ಬೆಳ್ಳಿ
|

Updated on:Apr 11, 2024 | 7:25 PM

14-ವರ್ಷದೊಳಗಿನ ಗ್ರೇಟರ್ ನೋಯ್ಡಾದ 1,300 ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪೂಲ್ ನಿಂದ ಅತ್ಯಂತ ಪ್ರತಿಭಾವಂತರನ್ನು ಅರಿಸುವ ಪ್ರಕ್ರಿಯೆಗೆ ಟಿವಿ9 ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕ ಬರುಣ್ ದಾಸ್ ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು.

ದೆಹಲಿ:  ಪುಟ್ಬಾಲ್ (football) ಕ್ರೀಡೆಗಿರುವ ಜನಪ್ರಿಯತೆ ಕ್ರಿಕೆಟ್ ಗಿರುವ ಜನಪ್ರಯತೆಗಿಂತ ಹತ್ತಾರು ಪಟ್ಟು ಹೆಚ್ಚು ಅಂದರೆ ಉತ್ಪ್ರೇಕ್ಷೆ ಅನಿಸದು. ನಮ್ಮ ದೇಶದಲ್ಲೂ ಸಾಕರ್ ಪ್ರತಿಭೆಗಳಿಗೆ (talent) ಕೊರತೆಯಿಲ್ಲ, ಅದರೆ ಬೆಳೆಯುವ ಸಿರಿ ಮೊಳಕೆಯಲ್ಲೇ ಎಂಬ ಮಾತಿನಂತೆ ಆಟದಲ್ಲಿ ಆಸಕ್ತಿಯುಳ್ಳವರನ್ನು ಹೆಕ್ಕಿ ತೆಗೆಯುವ ಕೆಲಸ ನಮ್ಮ ದೇಶದಲ್ಲಿ ನಡೆಯಲ್ಲ. ಇದನ್ನು ಅರಿತೇ ಟಿವಿ9 ನೆಟ್ವರ್ಕ್ ಪುಟ್ಬಾಲ್ ಪ್ರತಿಭೆಗಳ ಅನ್ವೇಷಣೆ ಆರಂಭಿಸಿದ್ದು ಇದಕ್ಕೆ ಸಂಬಂಧಿಸಿದಂತೆ ನ್ಯೂಸ್9, ಇಂಡಿಯನ್ ಟೈಗರ್ ಮತ್ತು ಟೈಗ್ರೆಸ್ (Indian Tiger and Tigress) ಎಂಬ ವಿನೂತನ ಮತ್ತು ವಿಶೇಷ ಅಭಿಯಾನವನ್ನು ಶುರು ಮಾಡಿದೆ. 14-ವರ್ಷದೊಳಗಿನ ಗ್ರೇಟರ್ ನೋಯ್ಡಾದ 1,300 ವಿದ್ಯಾರ್ಥಿ-ವಿದ್ಯಾರ್ಥಿನಿಯರ ಪೂಲ್ ನಿಂದ ಅತ್ಯಂತ ಪ್ರತಿಭಾವಂತರನ್ನು ಅರಿಸುವ ಪ್ರಕ್ರಿಯೆಗೆ ಟಿವಿ9 ನೆಟ್ವರ್ಕ್ ವ್ಯವಸ್ಥಾಪಕ ನಿರ್ದೇಶಕ ಬರುಣ್ ದಾಸ್ (Barun Das) ಚಾಲನೆ ನೀಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾಡಿದರು. ಜರ್ಮನಿ, ಆಸ್ಟ್ರಿಯ ಮತ್ತು ನೆದರ್ಲ್ಯಾಂಡ್ ದೇಶಗಳಲ್ಲಿರುವ ಫುಟ್ಬಾಲ್ ಸಂಸ್ಥೆಗಳ ಪ್ರತಿನಿಧಿಗಳು ಆಯ್ಕೆಯಾದ ಪ್ರತಿಭೆಗಳಿಗೆ ತರಬೇತಿ ನೀಡಲಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   Rohit Sharma: ಟಿ20 ಕ್ರಿಕೆಟ್​ನಲ್ಲಿ ಹಿಸ್ಟರಿ ಬರೆದ ಹಿಟ್​ಮ್ಯಾನ್

Published on: Apr 11, 2024 07:20 PM