News9 Global Summit: ಜರ್ಮನಿಯಲ್ಲೇ ನ್ಯೂಸ್9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?; ಸಿಇಒ ಬರುಣ್ ದಾಸ್ ಹೇಳಿದ್ದು ಹೀಗೆ
ನ್ಯೂಸ್9 ಜಾಗತಿಕ ಶೃಂಗಸಭೆ ಜರ್ಮನಿಯಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣವೇನೆಂಬುದರ ಬಗ್ಗೆ ಟಿವಿ9 ನೆಟ್‌ವರ್ಕ್ ಎಂಡಿ ಬರುಣ್ ದಾಸ್ ಬಹಿರಂಗಪಡಿಸಿದ್ದಾರೆ.
ನವದೆಹಲಿ: ಟಿವಿ-9 ನೆಟ್‌ವರ್ಕ್‌ನ ಆಶ್ರಯದಲ್ಲಿ ನ್ಯೂಸ್9 ಗ್ಲೋಬಲ್ ಶೃಂಗಸಭೆ ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ಪ್ರಾರಂಭವಾಗಿದೆ. ಈ ಅಂತಾರಾಷ್ಟ್ರೀಯ ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಅವರು ನವೆಂಬರ್ 22ರಂದು ವರ್ಚುವಲ್ ಮೂಲಕ ತಮ್ಮ ಮುಖ್ಯ ಭಾಷಣವನ್ನು ಮಾಡಲಿದ್ದಾರೆ. ನ್ಯೂಸ್ 9 ಆಶ್ರಯದಲ್ಲಿ ನವೆಂಬರ್ 21ರಿಂದ 23ರವರೆಗೆ ನಡೆಯಲಿರುವ ಈ ಜಾಗತಿಕ ಶೃಂಗಸಭೆಯಲ್ಲಿ ದೇಶ-ವಿದೇಶಗಳಿಂದ ಮುಖ್ಯ ಅತಿಥಿಗಳು ಆಗಮಿಸಿದ್ದಾರೆ. ನೀತಿ ನಿರೂಪಕರು, ನಾವೀನ್ಯಕಾರರು ಮತ್ತು ಇತರ ಪ್ರಮುಖರು ಶೃಂಗಸಭೆಯಲ್ಲಿ ವೇದಿಕೆಯನ್ನು ಹಂಚಿಕೊಳ್ಳುತ್ತಾರೆ. ಈ ಶೃಂಗಸಭೆಯನ್ನು ಜರ್ಮನಿಯಲ್ಲೇ ಆಯೋಜನೆ ಮಾಡಲು ಕಾರಣವೇನೆಂಬುದರ ಬಗ್ಗೆ ಟಿವಿ-9 ನೆಟ್‌ವರ್ಕ್ ಎಂಡಿ ಮತ್ತು ಸಿಇಓ ಬರುಣ್ ದಾಸ್ ವಿವರಿಸಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ