ಅಮೇರಿಕಾದಲ್ಲೂ ಹೀಗಾಗುತ್ತೆ: ಆಪರೇಶನ್ ನಡೆಯುವಾಗ ಕಣ್ಣೀರು ಹಾಕಿದ್ದಕ್ಕೆ ಹಣ ತೆತ್ತ ಮಹಿಳೆ!

| Updated By: Vinay Bhat

Updated on: Oct 03, 2021 | 6:41 AM

ಆಪರೇಷನ್​ ನಡೆಯುವಾಗ ಏನನ್ನೋ ನೆನೆದು ಅವರ ಕಣ್ಣಲ್ಲಿ ನೀರು ಜಿನುಗಿದೆ. ಆ ಆಸ್ಪತ್ರೆಯವರಿಗೆ ಅಷ್ಟು ಸಾಕಿತ್ತು. ಆಸ್ಪತ್ರೆ ನೀಡಿದ ಬಿಲ್ ನಲ್ಲಿ ಮಿಜ್ ಕಣ್ಣೀರು ಹಾಕಿದ್ದಕ್ಕೆ 11 ಡಾಲರ್​ಗಳನ್ನು ಸೇರಿಸಿದೆ!

ನೀವು ಜಗತ್ತಿನ ಅತಿ ಮುಂದುವರಿದ ರಾಷ್ಟ್ರವೆಂದು ಕರೆಸಿಕೊಳ್ಳುವ ಅಮೆರಿಕಾನಲ್ಲಿ ವಾಸವಾಗಿದ್ದೀರಾ? ಅಥವಾ ನಿಮ್ಮ ಸಂಬಂಧಿಕರಲ್ಲಿ ಯಾರಾದರೂ ಅಂಕಲ್ ಸ್ಯಾಮ್ನ ದೇಶದಲ್ಲಿದ್ದರೆ, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಸ್ಥಿತಿ ಎದುರಾಗಿದ್ದರೆ ಮತ್ತು ಅದನ್ನು ನೆನಸಿಕೊಂಡು ಅವರು ಆತಂಕಿತರಾಗಿ ಕಣ್ಣೀರು ಹಾಕುತ್ತಿದ್ದರೆ, ಕಣ್ಣೀರನ್ನೆಲ್ಲ ಮನೆಯಲ್ಲೇ ಬರಿದು ಮಾಡಿಕೊಂಡೇ ಆಸ್ಪತ್ರೆಗೆ ದಾಖಲಾಗುವಂತೆ ಅವರಿಗೆ ದಯವಿಟ್ಟು ಹೇಳಿ. ಇದೇನು ತಮಾಷೆ ಅಂತ ಕೋಪ ಮಾಡ್ಕೋಬೇಡಿ. ವಿಷಯವೇ ಹಾಗಿದೆ. ಅಮೇರಿಕಾದ ಆಸ್ಪತ್ರೆಯೊಂದರಲ್ಲಿ ಮಚ್ಚೆ ತೆಗೆಸಿಕೊಳ್ಳುವ ಒಂದು ಚಿಕ್ಕ ಆಪರೇಶನ್ಗೆ ಅಂತ ಮಹಿಳೆಯೊಬ್ಬರು ದಾಖಲಾಗಿದ್ದರು. ಅವರ ಹೆಸರು ಮಿಜ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಮಹಿಳೆಯಾಗಿದ್ದಾರೆ.

ಓಕೆ, ಆಪರೇಷನ್​ ನಡೆಯುವಾಗ ಏನನ್ನೋ ನೆನೆದು ಅವರ ಕಣ್ಣಲ್ಲಿ ನೀರು ಜಿನುಗಿದೆ. ಆ ಆಸ್ಪತ್ರೆಯವರಿಗೆ ಅಷ್ಟು ಸಾಕಿತ್ತು. ಆಸ್ಪತ್ರೆ ನೀಡಿದ ಬಿಲ್ ನಲ್ಲಿ ಮಿಜ್ ಕಣ್ಣೀರು ಹಾಕಿದ್ದಕ್ಕೆ 11 ಡಾಲರ್​ಗಳನ್ನು ಸೇರಿಸಿದೆ! ನಮ್ಮ ದೇಶದ ಕರೆನ್ಸಿಯಲ್ಲಾದರೆ ಸುಮಾರು 820 ರೂಪಾಯಿ. ಮಚ್ಚೆ ತೆಗೆಯುವುದಕ್ಕೆ 223 ಡಾಲರ್, ಅತ್ತಿದ್ದಕ್ಕೆ 11 ಡಾಲರ್ ಅಂತ ಬಿಲ್​ನಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ.

ಮಿಜ್, ಸದರಿ ಬಿಲ್ಲನ್ನು ಸೋಷಿಯಲ್ ಮೀಡಿಯಾನಲ್ಲಿ ಶೇರ್ ಮಾಡಿದ್ದಾರೆ. ನೆಟ್ಟಿಗರು ಅದನ್ನು ನೋಡಿ ಹೌಹಾರಿದ್ದಾರೆ. ಅವರಲ್ಲಿ ಹಲವು ಜನ ಆಸ್ಪತ್ರೆಯನ್ನು ತರಾಟೆಗೆ ತೆಗೆದುಕೊಂಡಿದ್ದರೆ ಇನ್ನೂ ಕೆಲವರು ತಾವು ಸಹ ಅಂಥ ಸಂದರ್ಭಗಳನ್ನು ಎದುರಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಸರ್ಜರಿಯ ನಂತರ ಆಸ್ಪತ್ರೆಯವರು ತನಗೆ ಒಂದು ಲಾಲಿಪಾಪ್ ಸಹ ಕೊಡಲಿಲ ಅಂತ ಮಿಜ್ ತಮ್ಮ ಇನ್ನೊಂದು ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಮಿಜ್ ಅವರಿ ಪೋಸ್ಟ್ ಕ್ಷಿಪ್ರಗತಿಯಲ್ಲಿ ವೈರಲ್ ಆಗಿ ಎರಡು ಲಕ್ಷಕ್ಕೂ ಹೆಚ್ಚು ಲೈಕ್​ಗಳನ್ನು ಸಂಪಾದಿಸಿದೆ.

ಬೇರೆಯವರು ಹೀಗೆಲ್ಲ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬರು ಹೀಗೆ ಹೇಳಿದ್ದಾರೆ.

ಇದನ್ನೂ ಓದಿ:  Navjot Singh Sidhu ನೈತಿಕತೆಯೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ: ವಿಡಿಯೊ ಸಂದೇಶ ಬಿಡುಗಡೆ ಮಾಡಿದ ನವಜೋತ್ ಸಿಂಗ್ ಸಿಧು