ಬಿಳಿಗಿರಿರಂಗನ ಬನದಲ್ಲಿ ಜಾಂಬವಂತನ ಕಾದಾಟ, ವಿಡಿಯೋ ನೋಡಿ
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬನದಲ್ಲಿ ಎರಡು ಕರಡಿಗಳು ಕಾದಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಬಿಳಿಗಿರಿರಂಗನ ರಂಗನ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಜಾಂಬವಂತನ ಕಾದಾಟ ನಡೆದಿದೆ. ಎರಡು ಕರಡಿಗಳ ಕಿತ್ತಾಟ ನೋಡಲು ಕ್ಯೂಟ್ ಅನ್ನಿಸುತ್ತೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಕರಡಿ ಸಂಖ್ಯೆ ಹೆಚ್ಚಾಗಿರುವುದರಿಂದ ಆಗಾಗ್ಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುತ್ತವೆ.
ಚಾಮರಾಜನಗರಮ (ಜನವರಿ 31): ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬನದಲ್ಲಿ ಎರಡು ಕರಡಿಗಳು ಕಾದಾಡುತ್ತಿರುವ ದೃಶ್ಯ ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿದೆ. ಬಿಳಿಗಿರಿರಂಗನ ರಂಗನ ಬೆಟ್ಟಕ್ಕೆ ಹೋಗುವ ರಸ್ತೆಯಲ್ಲಿ ಜಾಂಬವಂತನ ಕಾದಾಟ ನಡೆದಿದೆ. ಕರಡಿ ಮತ್ತೊಂದು ಕರಡಿಯನ್ನು ಅಟ್ಟಾಡಿಸಿಕೊಂಡು ಹೋಗಿ ಜಗಳವಾಡುವ ದೃಶ್ಯ ಸೆರೆಯಾಗಿದೆ. ಬಿಳಿಗಿರಿರಂಗನ ಬೆಟ್ಟದಲ್ಲಿ ಕರಡಿ ಸಂಖ್ಯೆ ಹೆಚ್ಚಾಗಿರುವುದರಿಂದ ಆಗಾಗ್ಗೆ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿರುತ್ತವೆ.
Published on: Jan 31, 2025 10:54 PM