ಕಲಬುರಗಿಯಲ್ಲಿ ಎಟಿಎಂನಿಂದ ರೂ 18 ಲಕ್ಷ ಕದ್ದಿದ್ದ ಅಂತರರಾಜ್ಯ ಕಳ್ಳರ ಮೇಲೆ ಪೊಲೀಸ್ ಫೈರಿಂಗ್, ಬಂಧನ: ಪೊಲೀಸ್ ಆಯುಕ್ತ

Updated on: Apr 26, 2025 | 10:37 AM

ಕಳ್ಳರನ್ನು ಹರಿಯಾಣ ಮೂಲದ ತಸ್ಲೀಮ್ ಮತ್ತು ಶರೀಫ್ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಡಾ ಶರಣಪ್ಪ ಹೇಳಿದರು. ಕಳ್ಳರು ಮತ್ತು ಹರಿತವಾದ ಆಯುಧಗಳಿಂದ ಅವರು ಹಲ್ಲೆ ನಡೆಸಿದಾಗ ಗಾಯಗೊಂಡಿರುವ ಇನ್ಸ್​ಪೆಕ್ಟರ್ ಬಸವರಾಜ್, ಪೊಲೀಸ್ ಕಾನ್​ಸ್ಟೇಬಲ್​ಗಳಾದ ರಾಜು, ಮಂಜುನಾಥ್ ಮತ್ತು ಫಿರೋಜ್ ಅವರನ್ನು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿ, ಏಪ್ರಿಲ್ 26: ಎರಡು ವಾರಗಳ ಹಿಂದೆ ಕಲಬುರಗಿಯ ಎಟಿಎಂ ಒಂದರಿಂದ ರೂ. 18 ಲಕ್ಷ ಕದ್ದು ಪರಾರಿಯಾಗಿದ್ದ ಅಂತರರಾಜ್ಯ ಗ್ಯಾಂಗೊಂದನ್ನು ಬಂಧಿಸುವಲ್ಲಿ ನಗರದ ಪೊಲೀಸ್ ಸಿಬ್ಬಂದಿ ಸಫಲವಾಗಿದೆ ಎಂದು ಪೊಲೀಸ್ ಆಯುಕ್ತ ಡಾ ಶರಣಪ್ಪ ಎಸ್ ಡಿ (Dr Sharanappa SD, Police Commissioner) ಹೇಳಿದರು. ಅವರು ನೀಡುವ ಮಾಹಿತಿ ಪ್ರಕಾರ ಕಳುವು ನಡೆದ ದಿನ ಖದೀಮರು ಬಳಸಿದ ಕಾರಿನ ಬಗ್ಗೆ ಪೊಲೀಸರಿಗೆ ಸುಳಿವಿತ್ತು. ನಿನ್ನೆ ರಾತ್ರಿ ಗಸ್ತು ಮತ್ತು ಬೀಟ್ಸ್ ನಲ್ಲಿದ್ದ ಪೊಲೀಸರು ಅದೇ ಕಾರು ನಗರದಲ್ಲಿ ಓಡಾಡುತ್ತಿರುವುದು ಕಂಡಾಗ ತಮ್ಮ ಮೇಲಧಿಕಾರಿಗಳಿಗೆ ಮಾಹಿತಿ ನೀಡಿ ಚೇಸ್ ಮಾಡಿದ್ದಾರೆ. ಕಳ್ಳರು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ ಕಾರಣ ಅವರಿಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು

ಇದನ್ನು ಓದಿ:  Viral: ಗ್ಯಾಸ್‌ ಕಟರ್‌ ಬಳಸಿ ಎಟಿಎಂನಿಂದ 38 ಲಕ್ಷ ರೂ. ದೋಚಿ ಪರಾರಿಯಾದ ಖದೀಮರು

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ