ಬನ್ನೇರುಘಟ್ಟ ಕಾಡಂಚಿನಲ್ಲಿ ಮಹಿಳೆಯ ಎರಡು ಕಾಲು ಪತ್ತೆ

ಬನ್ನೇರುಘಟ್ಟ ಕಾಡಂಚಿನಲ್ಲಿ ಮಹಿಳೆಯ ಎರಡು ಕಾಲು ಪತ್ತೆ

ರಾಮು, ಆನೇಕಲ್​
| Updated By: ಸಾಧು ಶ್ರೀನಾಥ್​

Updated on: Mar 15, 2024 | 10:13 AM

ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರ್ಘಟ್ಟದ ಸಮೀಪದಲ್ಲಿರುವ ಮುನಿ ಮಾರಯ್ಯನ ದೊಡ್ಡಿ ಅರಣ್ಯದಂಚಿನಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಎರಡು ಕಾಲುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರು ಇಂದು ಬೆಳಗ್ಗೆ ವಾಕಿಂಗ್ ಹೋದಂತಹ ಸಂದರ್ಭದಲ್ಲಿ ಕಾಲುಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸಿದ್ದಾರೆ.

ಬನ್ನೇರುಘಟ್ಟ ಕಾಡಂಚಿನಲ್ಲಿ (Bannerghatta forest) ಪದೇ ಪದೇ ಮಹಿಳೆಯರ (Woman) ಅಂಗಾಂಗಳು ಪತ್ತೆಯಾಗುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಇಪ್ಪತ್ತು ದಿನಗಳ ಹಿಂದೆ ಮಹಿಳೆ ಕೈ, ಇಂದು ಮಹಿಳೆಯ ಎರಡು ಕಾಲುಗಳು ಪತ್ತೆಯಾಗಿದ್ದು, ದೇಹದ ಉಳಿದ ಅಂಗಾಂಗಳ ಶೋಧ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬನ್ನೇರ್ಘಟ್ಟದ ಸಮೀಪದಲ್ಲಿರುವ ಮುನಿ ಮಾರಯ್ಯನ ದೊಡ್ಡಿ ಅರಣ್ಯದಂಚಿನಲ್ಲಿ ಸುಮಾರು 30 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಎರಡು ಕಾಲುಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸ್ಥಳೀಯರು ಇಂದು ಬೆಳಗ್ಗೆ ವಾಕಿಂಗ್ ಹೋದಂತಹ ಸಂದರ್ಭದಲ್ಲಿ ಕಾಲುಗಳನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಸ್ಥಳಕ್ಕಾಗಮಿಸಿದ ಬನ್ನೇರುಘಟ್ಟ ಪೊಲೀಸರು, ವಿಧಿವಿಜ್ಞಾನ ಪ್ರಯೋಗಾಲಯ ತಂಡ ಮತ್ತು ಶ್ವಾನದಳ ಪರಿಶೀಲನೆ ನಡೆಸಿದ್ದಾರೆ. 15 ರಿಂದ 20 ದಿನಗಳ ಹಿಂದೆ ಬೇರೆಲ್ಲೋ ಕೊಲೆಗೈದ ದುಷ್ಕರ್ಮಿಗಳು ಬಳಿಕ ಮಹಿಳೆಯ ಅಂಗಾಂಗಳನ್ನು ಕತ್ತರಿಸಿ ಎಸೆದು ಹೋಗಿದ್ದಾರೆ ಎನ್ನಲಾಗಿದೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ