Tree Bank: ಪರಿಸರವನ್ನು ಅಗಾಧವಾಗಿ ಪ್ರೀತಿಸುವ ಇಬ್ಬರು ಸಮಾನಮನಸ್ಕ ಸ್ನೇಹಿತರು ದೆಹಲಿ ಹೊರವಲಯದಲ್ಲಿ ಸಸಿಗಳ ಬ್ಯಾಂಕ್ ಆರಂಭಿಸಿದ್ದಾರೆ!

Tree Bank: ಪರಿಸರವನ್ನು ಅಗಾಧವಾಗಿ ಪ್ರೀತಿಸುವ ಇಬ್ಬರು ಸಮಾನಮನಸ್ಕ ಸ್ನೇಹಿತರು ದೆಹಲಿ ಹೊರವಲಯದಲ್ಲಿ ಸಸಿಗಳ ಬ್ಯಾಂಕ್ ಆರಂಭಿಸಿದ್ದಾರೆ!

ಅರುಣ್​ ಕುಮಾರ್​ ಬೆಳ್ಳಿ
|

Updated on: Mar 25, 2023 | 8:08 AM

ಇವರ ಟ್ರೀ ಬ್ಯಾಂಕ್ ನಿಂದ ಸಸಿಯನ್ನು ಪಡೆಯಲಿಚ್ಛಿಸುವವರು ಅದನ್ನು ಪಡೆದ ಮೇಲೆ ತಮ್ಮ ಮನೆಯ ಹಿತ್ತಲಲ್ಲಾಲೀ, ಓಣಿಯಲ್ಲಾಗಲಿ ಅಥವಾ ಬೇರೆ ಎಲ್ಲೇಯಾಗಲಿ ನೆಟ್ಟು ಪೋಷಿಸುವುದನ್ನು ತೋರಿಸುವ ಒಂದು ಪೋಟೋವನ್ನು ಅವರಿಗೆ ಕಳಿಸಬೇಕು.

ನವದೆಹಲಿ: ತಮ್ಮ ಸುತ್ತಮುತ್ತಲಿನ ಪರಿಸರವನ್ನು (environment) ಸಂರಕ್ಷಿಸಲು ಮತ್ತು ಹಸಿರು ವನರಾಶಿಯನ್ನು (greenery) ಕಾಯ್ದುಕೊಳ್ಳಲು ಪರಿಸರದ ಬಗ್ಗೆ ಆಪಾರ ಕಾಳಜಿ ಇರುವ ಇಬ್ಬರು ಸಮಾನಮನಸ್ಕ ಸ್ನೇಹಿತರು ನಗರದ ಹೊರವಲಯದಲ್ಲಿ ಸಸಿ ಬ್ಯಾಂಕ್​ಗಳನ್ನು (Tree Banks) ಸ್ಥಾಪಿಸಿದ್ದೂ ಅಲ್ಲದೆ, ಜನರಿಗೆ ಅವುಗಳನ್ನು ಉಚಿತವಾಗಿ ಹಂಚುತ್ತಿದ್ದಾರೆ.

‘ನನ್ನ ಗೆಳೆಯ ಪ್ರದೀಪ್ ಮತ್ತು ನಾನು ಪರಿಸರ ಮತ್ತು ನಿಸರ್ಗದ ಬಗ್ಗೆ ಅಪಾರ ಕಾಳಜಿ ಮತ್ತು ವ್ಯಾಮೋಹ ಹೊಂದಿದ್ದೇವೆ. ಪ್ರದೀಪ್ ಗಾಜಿಯಾಬಾದ್ ನಲ್ಲಿ ಸಸಿಗಳ ಬ್ಯಾಂಕ್ ಆರಂಭಿಸಿದ್ದರೆ ನಾನು ನೋಯ್ಡಾದ ಸೆಕ್ಟರ್ 142 ರಲ್ಲಿ ಶುರುಮಾಡಿದ್ದೇನೆ,’ ಎಂದು ಸಸಿ ಬ್ಯಾಂಕ್ ಮಾಲೀಕರಾದ ರಾಜೀವ್ ಶರ್ಮ ಹೇಳುತ್ತಾರೆ.

ಇದನ್ನೂ ಓದಿ: ನೀತಿ ಸಂಹಿತೆ ಸಿದ್ದತೆಗೆ ಜಿಲ್ಲಾಧಿಕಾರಿಗಳಿಗೆ ತುರ್ತು ಸಂದೇಶ, ಚುನಾವಣೆ ದಿನಾಂಕ ಘೋಷಣೆ ಸುಳಿವು ಕೊಟ್ಟ ಆಯೋಗ

ಇವರ ಟ್ರೀ ಬ್ಯಾಂಕ್ ನಿಂದ ಸಸಿಯನ್ನು ಪಡೆಯಲಿಚ್ಛಿಸುವವರು ಅದನ್ನು ಪಡೆದ ಮೇಲೆ ತಮ್ಮ ಮನೆಯ ಹಿತ್ತಲಲ್ಲಾಲೀ, ಓಣಿಯಲ್ಲಾಗಲಿ ಅಥವಾ ಬೇರೆ ಎಲ್ಲೇಯಾಗಲಿ ನೆಟ್ಟು ಪೋಷಿಸುವುದನ್ನು ತೋರಿಸುವ ಒಂದು ಪೋಟೋವನ್ನು ಅವರಿಗೆ ಕಳಿಸಬೇಕು.

‘ಬ್ಯಾಂಕ್ ಸ್ಥಾಪಿಸುವ ಪರಿಕಲ್ಪನೆ ಪ್ರದೀಪ್ ಅವರದ್ದು, ಮತ್ತು ಸಸಿಗಳ ಬ್ಯಾಂಕ್ ಮೊದಲು ಆರಂಭಿಸಿದ್ದು ಅವರೇ ಎಂದು ಹೇಳುವ ರಾಜೀವ್ ಸ್ನೇಹಿತನಿಂದ ಪ್ರೇರಣೆ ಹೊಂದಿ ತಾನೊಂದು ಬ್ಯಾಂಕ್ ಸ್ಥಾಪಿಸಿದೆ ಎನ್ನುತ್ತಾರೆ.

‘ನಮ್ಮ ಬದುಕಿನಲ್ಲಿ ಪರಿಸರ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ. ಆದರೆ ನಾವದನ್ನು ವಿಪರೀತವಾಗಿ ಹಾಳು ಮಾಡಿದ್ದೇವೆ. ನಮ್ಮ ಮುಂದಿನ ತಲೆಮಾರಿಗೆ ನಾವು ಇಂಥ ಪರಿಸರ ಬಿಟ್ಟು ಹೋಗಬೇಕಾ? ಈ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡೇ ನಾನು ಟ್ರೀ ಬ್ಯಾಂಕ್ ಆರಂಭಿಸಿದೆ,’ ಎಂದು ರಾಜೀವ್ ಹೇಳುತ್ತಾರೆ.

ಇದನ್ನೂ ಓದಿ: Vitamin E capsules: ಆರೋಗ್ಯಕರ ಚರ್ಮ ಮತ್ತು ಕೂದಲಿಗೆ ವಿಟಮಿನ್ ಇ ಕ್ಯಾಪ್ಸುಲ್‌

ತಮ್ಮಿಂದ ಸಸಿಗಳನ್ನು ತೆಗೆದುಕೊಂಡ ಹೋದವರ ಮನೆಗಳಿಗೆ ಆಗಾಗ್ಗೆ ಭೇಟಿ ನೀಡುವ ರಾಜೀವ್ ಅವುಗಳ ಸಂರಕ್ಷಣೆ ಬಗ್ಗೆ ಸಲಹೆ ನೀಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ