Maha Kumbh 2025: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಸಂಸ್ಕಾರದಲ್ಲಿ ಭಾಗಿಯಾದ ಇಬ್ಬರು ರಷ್ಯನ್ ಮಹಿಳೆಯರು!

Maha Kumbh 2025: ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಸಂಸ್ಕಾರದಲ್ಲಿ ಭಾಗಿಯಾದ ಇಬ್ಬರು ರಷ್ಯನ್ ಮಹಿಳೆಯರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 15, 2025 | 11:56 AM

Maha Kumbh 2025: ಎಲೀನಾಳೊಂದಿಗಿರುವ ಮತ್ತೊಬ್ಬ ರಷ್ಯನ್ ಮಹಿಳೆಗೆ ಇಂಗ್ಲಿಷ್ ಭಾಷೆ ಅರ್ಥವಾಗಲ್ಲ ಮತ್ತು ಮಾತಾಡಲೂ ಬರೋದಿಲ್ಲ. ನಮ್ಮ ಪ್ರತಿನಿಧಿ ಕೇಳುವ ಪ್ರಶ್ನೆಯನ್ನು ಎಲೀನಾ ಸನ್ನೆಗಳ ಮೂಲಕ ವಿವರಿಸಿದಾಗ ಅವರು ಅರ್ಧರ್ಧ ವಾಕ್ಯಗಳಲ್ಲಿ ಉತ್ತರಿಸುತ್ತಾರೆ. ಅದೇನೆ ಇರಲಿ, ನಮ್ಮ ದೇಶದ ಸನಾತನ ಧರ್ಮದ ಪ್ರಭಾವಕ್ಕೊಳಗಾಗಿ ಮಹಾಕುಂಭ ಮೇಳದಲ್ಲಿ ಭಾಗಿಯಾಗಿರುವ ರಷ್ಯನ್ನರು ಅಭಿನಂದನಾರ್ಹರು.

ಪ್ರಯಾಗ್​ರಾಜ್(ಉತ್ತರ ಪ್ರದೇಶ): ಮಕರ ಸಂಕ್ರಾಂತಿ ಹಬ್ಬದ ದಿನದಂದು ಮಹಾಕುಂಭ ಮೇಳದಲ್ಲಿ ಕೋಟಿಗಟ್ಟಲೆ ಭಾರತೀಯರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಸಂಸ್ಕಾರದಲ್ಲಿ ಭಾಗಿಯಾಗಿದ್ದಾರೆ. ಕೇವಲ ಭಾರತೀಯರು ಮಾತ್ರ ಶಾಹಿ ಸ್ನಾನ್ ಮಾಡಿದ್ದಾರೆಂದು ಭಾವಿಸಬೇಡಿ, ಭಾರತದ ಸನಾತನ ಧರ್ಮದಿಂದ ಪ್ರಭಾವಿತರಾಗಿರುವ ಇಬ್ಬರು ರಷ್ಯನ್ ಮಹಿಳೆಯರು ಮಹಾಕುಂಭದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಿದ್ದಾರೆ. ಪ್ರಯಾಗ್ ರಾಜ್​​ನಲ್ಲಿರುವ ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿರುವ ಎಲೀನಾ ಹೆಸರಿನ ಮಹಿಳೆ, ಹೋಲಿ ಡಿಪ್ ಹೃದಯದಲ್ಲಿ ಹೊಸ ಭಾವವನ್ನು ಮತ್ತು ಹಗುರತೆಯನ್ನು ಮೂಡಿಸುತ್ತದೆ, ತಾನು ಇಂದರಿಂದ ತುಂಬಾ ಪ್ರಭಾವಿತಳಾಗಿದ್ದೇನೆ ಮತ್ತು ಇದರಲ್ಲಿ ಭಾಗಿಯಾಗಿದ್ದು ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತಿದೆ ಎನ್ನುತ್ತಾರೆ. ಮುಂದುವರಿದು ಮಾತಾಡುವ ಎಲೀನಾ, ಬೇರೆ ಬೇರೆ ದೇಶಗಳ ಅನೇಕ ಜನರು ಭಾರತದ ಸನಾತನ ಧರ್ಮ ಮತ್ತು ಸಂಸ್ಕೃತಿಯಿಂದ ಆಕರ್ಷಿತರಾಗಿ ಇಲ್ಲಿಗೆ ಬರುತ್ತಿದ್ದಾರೆ ಎಂದು ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Maha Kumbh 2025: ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಾಗಲೇ ಪಾಸಿಟಿವ್ ಎನರ್ಜಿ ಏನು ಅಂತ ಗೊತ್ತಾಗುತ್ತದೆ ಎನ್ನುತ್ತಾರೊಬ್ಬ ಕನ್ನಡಿಗ