ಹಾವುಗಳ ಪ್ರೇಮದ ಬೆಸುಗೆ: ಬರೋಬ್ಬರಿ ಅರ್ಧ ಗಂಟೆ ಮಿಲನ ದೃಶ್ಯ ಸೆರೆ
ಎರಡು ಹಾವುಗಳ ಮಿಲನ ಮಹೋತ್ಸವವೇ ಕಣ್ಣಿಗೆ ಬೀಳುವುದು ಅಪರೂಪ. ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಹಾವುಗಳ ಮಿಲನದ ದೃಶ್ಯ ಕಂಡುಬಂದಿದೆ. ಬರೋಬ್ಬರಿ ಅರ್ಧಗಂಟೆಗಳ ಕಾಲ ನಡೆದ ಮಿಲನ ಮಹೋತ್ಸವದಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಹೊರಳಾಡುವುದನ್ನು ವ್ಯಕ್ತಿಯೋರ್ವ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.
ಕೊಪ್ಪಳ, (ಜೂನ್ 29): ಎರಡು ಹಾವುಗಳ ಮಿಲನ ಮಹೋತ್ಸವವೇ ಕಣ್ಣಿಗೆ ಬೀಳುವುದು ಅಪರೂಪ. ಇಂತಹ ದೃಶ್ಯ ಕಂಡರೆ ಗ್ರಾಮೀಣ ಪ್ರದೇಶದ ಜನ ಭಯ, ಭಕ್ತಿಯಿಂದ ಕೈಮುಗಿದು ಮುಂದಕ್ಕೆ ಸಾಗುತ್ತಾರೆ. ಈ ದೃಶ್ಯ ನೋಡುವುದು ಮಹಾಪಾಪ, ಹಾವುಗಳ ಶಾಪಕ್ಕೆ ತುತ್ತಾಗುತ್ತೇವೆ ಎಂಬ ಭೀತಿ, ಮೂಢನಂಬಿಕೆ ಇಂದಿಗೂ ಕೆಲವರಲ್ಲಿದೆ. ಆದರೂ ಕೆಲವರು ಹಾವುಗಳ ಮಿಲನದ ದೃಶ್ಯವನ್ನು ಸೆರೆಹಿಡಿಯುತ್ತಾರೆ. ಅದರಂತೆ ಕೊಪ್ಪಳ ತಾಲೂಕಿನ ಬಿ.ಹೊಸಹಳ್ಳಿ ಗ್ರಾಮದ ಜಮೀನಿನಲ್ಲಿ ಹಾವುಗಳ ಮಿಲನದ ದೃಶ್ಯ ಕಂಡುಬಂದಿದೆ. ಬರೋಬ್ಬರಿ ಅರ್ಧಗಂಟೆಗಳ ಕಾಲ ನಡೆದ ಮಿಲನ ಮಹೋತ್ಸವದಲ್ಲಿ ಎರಡು ದೊಡ್ಡ ಹಾವುಗಳು ತೆಕ್ಕೆ ಹಾಕಿಕೊಂಡು ಹೊರಳಾಡುವುದನ್ನು ವ್ಯಕ್ತಿಯೋರ್ವ ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾನೆ.
Published on: Jun 29, 2025 12:20 PM