16 ವರ್ಷದ ಹುಡುಗನ ಪಾತ್ರಕ್ಕಾಗಿ ತೂಕ ಕಡಿಮೆ ಮಾಡಿಕೊಂಡ ವಿನಯ್ ರಾಜ್ಕುಮಾರ್
‘ಅಂದೊಂದಿತ್ತು ಕಾಲ’ ಸಿನಿಮಾದಲ್ಲಿ ನಟ ವಿನಯ್ ರಾಜ್ಕುಮಾರ್ ಅವರು ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅವರು ಶಾಲೆಯ ಹುಡುಗನ ಪಾತ್ರ ಮಾಡಿದ್ದಾರೆ. 16 ವರ್ಷ ವಯಸ್ಸಿನ ಹುಡುಗನ ರೀತಿ ಕಾಣಲು ಅವರು ದೇಹದ ತೂಕ ಕಡಿಮೆ ಮಾಡಿಕೊಂಡರು. ಆ ಬಗ್ಗೆ ಅವರು ಮಾತನಾಡಿದ್ದಾರೆ ನೋಡಿ..
ನಟ ವಿನಯ್ ರಾಜ್ಕುಮಾರ್ ಅವರು ‘ಅಂದೊಂದಿತ್ತು ಕಾಲ’ (Andondittu Kaala) ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬಿಡುಗಡೆಗೆ ಸಿದ್ಧವಾಗುತ್ತಿರುವ ಈ ಸಿನಿಮಾದಲ್ಲಿ ಅವರು ಶಾಲೆಯ ಹುಡುಗನ ಪಾತ್ರವನ್ನು ಮಾಡಿದ್ದಾರೆ. 16 ವರ್ಷ ವಯಸ್ಸಿನ ಹುಡುಗನ ರೀತಿ ಕಾಣಲು ಅವರು ದೇಹದ ತೂಕ ಕಡಿಮೆ ಮಾಡಿಕೊಂಡಿದ್ದರು. ಆ ಕುರಿತು ಮಾತನಾಡಿದ್ದಾರೆ. ‘ಒಂದಷ್ಟು ತೂಕ ಕಡಿಮೆ ಮಾಡಿಕೊಂಡೆ. ಚಿಕ್ಕ ಹುಡುಗನ ಮುಗ್ಧತೆ ತೋರಿಸಬೇಕಿತ್ತು. 16ನೇ ವಯಸ್ಸು ಅಂದರೆ ತುಂಬಾ ಕಡಿಮೆ. ನಾನು ಹಾಗೆ ಕಾಣಿಸಲ್ಲ ಅಂದುಕೊಂಡಿದ್ದೆ. ಆದರೆ ಆ ಲುಕ್ ಎಲ್ಲರಿಗೂ ಇಷ್ಟ ಆಗಿದೆ. ಎಲ್ಲರೂ ಪಾಸಿಟಿವ್ ಪ್ರತಿಕ್ರಿಯೆ ಕೊಟ್ಟಿದ್ದಾರೆ’ ಎಂದು ವಿನಯ್ ರಾಜ್ಕುಮಾರ್ (Vinay Rajkumar) ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos