Loading video

ಮರಿ ಹುಲಿಗಳ ರಾಜ ಗಾಂಭೀರ್ಯ ನಡಿಗೆ: ವಿಡಿಯೋ ನೋಡಿ

| Updated By: ರಮೇಶ್ ಬಿ. ಜವಳಗೇರಾ

Updated on: Mar 07, 2025 | 9:00 PM

ಎರಡು ಮರಿ ಹುಲಿಗಳು ರಾಜ ಗಾಂಭೀರ್ಯದಿಂದ ರಸ್ತೆ ದಾಟಿದ ವಿಡಿಯೋ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬರ್ಚಿ ಕ್ರಾಸ್ ಬಳಿ ಗಣೇಶಗುಡಿಯಲ್ಲಿ ಯಾರ ಭಯವೂ ಇಲ್ಲದೇ ರಸ್ತೆ ಹುಲಿ ಮರಿಗಳು ರಸ್ತೆ ದಾಟುತ್ತಿರುವ ದೃಶ್ಯ ಅದ್ಭತ. ಪ್ರಯಾಣಿಕರು ತೆರಳುತ್ತಿದ್ದಾಗ ಏಕಾಏಕಿ ಕಾರಿಗೆ ಮರಿ ಹುಲಿಗಳು ಅಡ್ಡ ಬಂದಿದ್ದು, ಒಂದು ಕ್ಷಣ ಪ್ರಯಾಣಿಕರು ದಂಗಾಗಿದ್ದಾರೆ.

ಕಾರವಾರ, (ಮಾರ್ಚ್​ 07): ಹುಲಿ ಅಂದ್ರೆ ಹುಲಿನೇ..ಎರಡು ಮರಿ ಹುಲಿಗಳು ರಾಜ ಗಾಂಭೀರ್ಯದಿಂದ ರಸ್ತೆ ದಾಟಿದ ವಿಡಿಯೋ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಯಾಗಿದೆ. ಉತ್ತರಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬರ್ಚಿ ಕ್ರಾಸ್ ಬಳಿ ಗಣೇಶಗುಡಿಯಲ್ಲಿ ಯಾರ ಭಯವೂ ಇಲ್ಲದೇ ರಸ್ತೆ ಹುಲಿ ಮರಿಗಳು ರಸ್ತೆ ದಾಟುತ್ತಿರುವ ದೃಶ್ಯ ಅದ್ಭತ. ಪ್ರಯಾಣಿಕರು ತೆರಳುತ್ತಿದ್ದಾಗ ಏಕಾಏಕಿ ಕಾರಿಗೆ ಮರಿ ಹುಲಿಗಳು ಅಡ್ಡ ಬಂದಿದ್ದು, ಒಂದು ಕ್ಷಣ ಪ್ರಯಾಣಿಕರು ದಂಗಾಗಿದ್ದಾರೆ. ಕೂಡಲೇ ಮೊಬೈಲ್‌ನಲ್ಲಿ ದೃಶ್ಯವನ್ನು ಸೆರೆ ಹಿಡಿದುಕೊಂಡಿದ್ದಾರೆ.

Published on: Mar 07, 2025 08:59 PM