AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ

Video: ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರ ಬಂಧನ

ನಯನಾ ರಾಜೀವ್
|

Updated on: May 19, 2026 | 7:14 AM

Share

ಜಪಾನಿನಲ್ಲಿ ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೋಕಿಯೋ ಉಪನಗರ ಚಿಬಾದಲ್ಲಿರುವ ಪ್ರಸಿದ್ಧ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಕ್ರಿಪ್ಟೋಕರೆನ್ಸಿ ಪ್ರಚಾರಕ್ಕಾಗಿ ಇವರು ಈ ಹುಚ್ಚು ಸಾಹಸಕ್ಕೆ ಕೈಹಾಕಿದ್ದರು ಎನ್ನಲಾಗಿದೆ. ಬಂಧಿತರನ್ನು 24 ವರ್ಷದ ರೀಡ್ ಜಹ್ನಾಯಿ ಡೇಸನ್ ಮತ್ತು 27 ವರ್ಷದ ನೀಲ್ ಜಬಾಹ್ರಿ ಡುವಾನ್ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವಿಡಿಯೋ ತುಣುಕುಗಳ ಪ್ರಕಾರ, ಡೇಸನ್ ನೀಲಿ ಬಣ್ಣದ ಸೂಟ್ ಧರಿಸಿ, ಮುಖಕ್ಕೆ ನಗುತ್ತಿರುವ ದೊಡ್ಡ ಎಮೋಜಿ ಹಾಕಿಕೊಂಡು ಮೃಗಾಲಯದ ರಕ್ಷಣಾ ಬೇಲಿಯನ್ನು ಜಿಗಿದು ಕೋತಿಗಳ ಆವರಣದೊಳಗೆ ನುಗ್ಗಿದ್ದರು, ಮತ್ತೊಬ್ಬ ಆರೋಪಿ ಡುವಾನ್ ಈ ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ.

ಟೋಕಿಯೋ, ಮೇ 19: ಜಪಾನಿನಲ್ಲಿ ಪಂಚ್ ಕೋತಿ ಇದ್ದ ಮೃಗಾಲಯಕ್ಕೆ ನುಗ್ಗಿದ್ದ ಇಬ್ಬರು ಅಮೆರಿಕನ್ನರನ್ನು ಬಂಧಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಟೋಕಿಯೋ ಉಪನಗರ ಚಿಬಾದಲ್ಲಿರುವ ಪ್ರಸಿದ್ಧ ಇಚಿಕಾವಾ ಸಿಟಿ ಮೃಗಾಲಯದಲ್ಲಿ ಈ ಘಟನೆ ನಡೆದಿದ್ದು, ಕ್ರಿಪ್ಟೋಕರೆನ್ಸಿ ಪ್ರಚಾರಕ್ಕಾಗಿ ಇವರು ಈ ಹುಚ್ಚು ಸಾಹಸಕ್ಕೆ ಕೈಹಾಕಿದ್ದರು ಎನ್ನಲಾಗಿದೆ.

ಬಂಧಿತರನ್ನು 24 ವರ್ಷದ ರೀಡ್ ಜಹ್ನಾಯಿ ಡೇಸನ್ ಮತ್ತು 27 ವರ್ಷದ ನೀಲ್ ಜಬಾಹ್ರಿ ಡುವಾನ್ ಎಂದು ಗುರುತಿಸಲಾಗಿದೆ. ವೈರಲ್ ಆಗಿರುವ ವಿಡಿಯೋ ತುಣುಕುಗಳ ಪ್ರಕಾರ, ಡೇಸನ್ ನೀಲಿ ಬಣ್ಣದ ಸೂಟ್ ಧರಿಸಿ, ಮುಖಕ್ಕೆ ನಗುತ್ತಿರುವ ದೊಡ್ಡ ಎಮೋಜಿ ಹಾಕಿಕೊಂಡು ಮೃಗಾಲಯದ ರಕ್ಷಣಾ ಬೇಲಿಯನ್ನು ಜಿಗಿದು ಕೋತಿಗಳ ಆವರಣದೊಳಗೆ ನುಗ್ಗಿದ್ದರು, ಮತ್ತೊಬ್ಬ ಆರೋಪಿ ಡುವಾನ್ ಈ ಇಡೀ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುತ್ತಿದ್ದ.

ಡೇಸನ್ ಧರಿಸಿದ್ದ ವಿಚಿತ್ರ ಉಡುಗೆ ಮತ್ತು ಎಮೋಜಿ ಮಾಸ್ಕ್, ಡಿಜಿಟಲ್ ಹಣವಾದ ಮೆಮೆಕಾಯಿನ್ ಕ್ರಿಪ್ಟೋಕರೆನ್ಸಿಗಳನ್ನು ಪ್ರಚಾರ ಮಾಡಲು ಬಳಸುವ ಸಂಕೇತವಾಗಿತ್ತು. ಮೃಗಾಲಯದ ಭದ್ರತಾ ಸಿಬ್ಬಂದಿ ತಕ್ಷಣವೇ ಅಲರ್ಟ್ ಆಗಿ ಇಬ್ಬರನ್ನೂ ವಶಕ್ಕೆ ಪಡೆದಿದ್ದರಿಂದ, ಅವರು ಪಂಚ್ ಅಥವಾ ಅಲ್ಲಿನ ಇತರ ಯಾವುದೇ ಕೋತಿಗಳಿಗೆ ಹಾನಿ ಮಾಡಲು ಸಾಧ್ಯವಾಗಲಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More