ಗುಂಡ್ಲುಪೇಟೆ ಬಳಿ ಆಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಪ್ರದೇಶದಲ್ಲಿ ಗುಡ್ಡದ ಮೇಲಿನ ಬಂಡೆ ಕುಸಿದು 2 ಕಾರ್ಮಿಕರು ಸಾವನ್ನಪ್ಪಿರುವ ಶಂಕೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2022 | 11:06 PM

ಒಟ್ಟು ಐವರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಪೈಕಿ ಮೂವರನ್ನು ರಕ್ಷಿಸಲಾಗಿದ್ದು ಉಳಿದಿಬ್ಬರ ಶೋಧ ಕಾರ್ಯ ಸಾಯಂಕಾಲದವರೆಗೆ ನಡೆದಿತ್ತು.

ಅಕ್ರಮ ಗಣಿಗಾರಿಕೆಯಿಂದಾಗಿ (illegal mining) ಇಲ್ಲೊಂದು ದುರಂತ ಸಂಭವಿಸಿದೆ. ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವುದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ (Gundlupet) ತಾಲ್ಲೂಕಿನ ಮಡಹಳ್ಳಿ ಗ್ರಾಮದ ಹೊರವಲಯ. ಗುಡ್ಡದಿಂದಾವೃತಗೊಂಡಿರುವ ಈ ಪ್ರದೇಶದಲ್ಲಿ ಅವ್ಯಾಹತವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಲಾಗಿದೆ. ಶುಕ್ರವಾರ ಗಣಿಗಾರಿಕೆಯ ಕೆಲಸ ಜಾರಿಯಲ್ಲಿದ್ದಾಗ ಗುಡ್ಡದ ಒಂದು ಭಾಗದ ಕಲ್ಲುಬಂಡೆಗಳು ಕುಸಿದು ಅಥವಾ ಜಾರಿ ಕೆಳಗೆ ತಗ್ಗುಪ್ರದೇಶದಲ್ಲಿ ನಿಂತಿದ್ದ ಟಿಪ್ಪರ್ (tipper) ಒಂದರ ಮೇಲು ಬಿದ್ದಿವೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಪಶ್ಚಿಮ ಬಂಗಾಳ ಮೂಲದ ಇಬ್ಬರು ಕಾರ್ಮಿಕರ ಮೇಲೆ ಬಂಡೆಗಳು ಉರುಳಿ ಅವರು ಸಾವನ್ನಪ್ಪಿರಬಹದೆಂದು ಶಂಕಿಸಲಾಗಿದೆ.

ಒಟ್ಟು ಐವರು ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅವರ ಪೈಕಿ ಮೂವರನ್ನು ರಕ್ಷಿಸಲಾಗಿದ್ದು ಉಳಿದಿಬ್ಬರ ಶೋಧ ಕಾರ್ಯ ಸಾಯಂಕಾಲದವರೆಗೆ ನಡೆದಿತ್ತು. ಗುಡ್ಡದ ಅಕ್ಕಪಕ್ಕದಲ್ಲಿ ವಾಸವಾಗಿರುವ ಜನರು ಹೇಳುವ ಪ್ರಕಾರ ಗಣಿ ಪ್ರದೇಶದಲ್ಲಿ, ಗುಡ್ಡದ ಕೆಳಗೆ ಜಾಸ್ತಿ ಜನ ಕೆಲಸ ಮಾಡುತ್ತಿದ್ದರಂತೆ.

ಘಟನೆಯ ಬಗ್ಗೆ ಮಾಧ್ಯಮದವರಿಗೆ ವಿವರಗಳನ್ನು ನೀಡಿದ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ ಅವರು ಪರವಾನಗಿ ಇಲ್ಲದೆ ಗಣಿಗಾರಿಕೆ ನಡೆಯುತ್ತಿದೆ ಎಂದು ಹೇಳುತ್ತಾರೆ. ಬಂಡೆಗಳ ಕೆಳಗೆ ಸಿಕ್ಕಹಾಕಿಕೊಂಡಿರಬಹುದಾದ ಕಾರ್ಮಿಕರನ್ನು ರಕ್ಷಿಸಲು ಸ್ಥಳೀಯ ಜನ ಧಾವಿಸುತ್ತಿರುವುದು ವಿಡಿಯೋನಲ್ಲಿ ಕಾಣುತ್ತದೆ.

ಇದನ್ನೂ ಓದಿ:   Viral Video: ರೊಚ್ಚಿಗೆದ್ದ ಹೋರಿಯಿಂದ ಮಗನನ್ನು ರಕ್ಷಿಸಿದ ತಂದೆ; ಹೃದಯಸ್ಪರ್ಶಿ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?