Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್

ಮಂಗಳೂರಿನಲ್ಲಿ ನಡುರಾತ್ರಿ ರೌಡಿಶೀಟರ್​ಗಳ ತಲ್ವಾರ್ ವಾರ್

ಅಶೋಕ್​ ಪೂಜಾರಿ, ಮಂಗಳೂರು
| Updated By: ವಿವೇಕ ಬಿರಾದಾರ

Updated on:Oct 25, 2024 | 10:16 AM

ದ‌ಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಯುವಕರು ಮಧ್ಯರಾತ್ರಿ ತಲ್ವಾರ್​ನಿಂದ ಹೊಡೆದಾಡಿಕೊಂಡಿದ್ದಾರೆ. ಯುವಕರ ಹೊಡೆದಾಟ ವಿಡಿಯೋ ವೈರಲ್​ ಆಗಿದೆ. ಹೊಡೆದಾಟದಲ್ಲಿ ಇಬ್ಬರು ಯುವಕರಿಗೆ ಗಂಭೀರ ಗಾಯವಾಗಿದೆ. ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಅಕ್ಟೋಬರ್​ 25: ದ‌ಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ಅಮ್ಮೆಮಾರ್ ಎಂಬಲ್ಲಿ ಎರಡು ಗುಂಪಿನ ಯುವಕರು ತಲ್ವಾರ್​ನಿಂದ ಹೊಡೆದಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ. ತಲವಾರು ದಾಳಿಯಲ್ಲಿ ತಸ್ಲೀಮ್ ಹಾಗೂ ಮಹಮ್ಮದ್ ಶಾಕೀರ್​ ಎಂಬುವರಿಗೆ ಗಂಭೀರ ಗಾಯವಾಗಿದೆ. ಮನ್ಸೂರ್, ಪಲ್ಟಿ ಇಮ್ರಾನ್ ತಂಡದಿಂದ ದಾಳಿ ನಡೆದಿದೆ. ಮುಸ್ತಾಕ ಯಾನೆ ಮಿಚ್ಚ, ಸರ್ಪುದ್ದೀನ್, ಅಶ್ರಫ್, ರಿಜ್ವಾನ್, ಸಫ್ವಾನ್, ಅದ್ನಾನ್, ನಿಸಾಕ್, ಯಾಸೀರ್, ಸುಹೈಲ್, ಜಾಹೀದ್, ಸಾದಿಕ್, ಲತೀಫ್ ದಾಳಿ ಮಾಡಿದ ಆರೋಪಿಗಳು.

ತಸ್ಲೀಮ್ ಹಾಗೂ ಆತನ ಸ್ನೇಹಿತರು ಮಾತನಾಡುತ್ತ ನಿಂತಿದ್ದರು. ಈ ತಸ್ಲೀಮ್​ಗೆ ಕರೆಯೊಂದು ಬಂದಿತ್ತು. ಫೋನ್​ನಲ್ಲಿ ತಸ್ಲೀಮ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅಮ್ಮೆಮಾರ್ ಶಾಲೆ ಬಳಿ ಬರುವಂತೆ ಹೇಳಿದ್ದಾರೆ. ಇದರಿಂದ ಕೋಪಗೊಂಡ ತಸ್ಲೀಮ್ ಹಾಗೂ ತಂಡ ಅಮ್ಮೆಮಾರ್ ಶಾಲೆ ಬಳಿಗೆ ಹೋದಾಗ ಆರೋಪಿ ಮನ್ಸೂರ್ ಹಾಗೂ ಇತರರು ತಲ್ವಾರ್​ನಿಂದ ದಾಳಿ ಮಾಡಿದ್ದಾರೆ. ತಸ್ಲೀಮ್​ ಬಲಗಾಲು, ಬಲಗೈಗೆ ಗಾಯಗವಾಗಿದೆ. ಇದೇ ವೇಳೆ ಮಹಮ್ಮದ್ ಶಾಕೀರ್​ಗೂ ತಲವಾರಿನಿಂದ ಹಲ್ಲೆ ಮಾಡಲಾಗಿದೆ. ಬಂಟ್ವಾಳ ‌ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೇ ದ್ವೇಷದಿಂದ ಕರೆಸಿ ತಲವಾರಿನಿಂದ ದಾಳಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published on: Oct 25, 2024 10:15 AM