Hasanamba Darshan: ಇಂದಿನಿಂದ ಹಾಸನಾಂಬ ದರ್ಶನಕ್ಕೆ ಅವಕಾಶ: ಶುಕ್ರವಾರ ಹರಿದು ಬಂದ ಭಕ್ತಸಾಗರ
ಹಾಸನದ ಅಧಿದೇವತೆ ಹಾಸನಂಬ ದೇಗುಲದ ಬಾಗಿಲನ್ನು ಗುರುವಾರ (ಅ.24) ರಂದು ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ದೇವಿಯ ದರ್ಶನಕ್ಕೆ ಇಂದಿನಿಂದ (ಅ.25) ಅವಕಾಶ ಮಾಡಿಕೊಡಲಾಗಿದೆ. ನಸುಕಿನ ಜಾವ 4 ಗಂಟೆಯಿಂದಲೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹಾಸನದ ಅಧಿದೇವತೆ ಹಾಸನಂಬ (Hasanamba) ದೇಗುಲದ ಬಾಗಿಲನ್ನು ಗುರುವಾರ (ಅ.24) ರಂದು ಶಾಸ್ತ್ರೋಕ್ತವಾಗಿ ತೆರೆಯಲಾಯಿತು. ದೇವಿಯ ದರ್ಶನಕ್ಕೆ ಇಂದಿನಿಂದ (ಅ.25) ಅವಕಾಶ ಮಾಡಿಕೊಡಲಾಗಿದೆ. ನಸುಕಿನ ಜಾವ 4 ಗಂಟೆಯಿಂದಲೇ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇಂದಿನಿಂದ 10 ದಿನಗಳ ಕಾಲ ಭಕ್ತರು ದರ್ಶನ ಮಾಡಬಹುದಾಗಿದೆ. ಹಾಸನಂಬ ದೇವಿಯ ದರ್ಶನಕ್ಕೆ ಮೊದಲ ದಿನ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಶುಕ್ರವಾರ ಶಕ್ತಿ ದೇವತೆಯ ದರ್ಶನಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದಾರೆ.
ಹಾಸನಾಂಬ ದೇಗಲುದ ಬಾಗಿಲನ್ನು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯಲಾಗುತ್ತದೆ. ಪ್ರತೀ ವರ್ಷ ಅಶ್ವಯುಜ ಮಾಸದ ಅಷ್ಟಮಿಯ ದಿನ ಬಾಗಿಲು ತೆರೆಯಲಾಗುತ್ತದೆ. ಸಾಮಾನ್ಯವಾಗಿ ಇದು ದೀಪಾಳಿ ಹಬ್ಬದ ಸಮಯದಲ್ಲಿ ಬರುತ್ತದೆ. ಈ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ವಾರ ಸಾರ್ವಜನಿಕರ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ.
ಇದನ್ನೂ ಓದಿ: ಹಾಸನಾಂಬ ದೇಗುಲದ ಗರ್ಭಗುಡಿ ಓಪನ್, ಆನ್ಲೈನ್ ಟಿಕೆಟ್ ಬುಕಿಂಗ್ ಮತ್ತು ಇನ್ನಿತರ ಸೇವೆ ವಿವರ ಇಲ್ಲಿದೆ
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ