AFG vs UAE: ವಿರೋಚಿತವಾಗಿ ಸೋಲುಂಡ ಯುಎಇ
Afghanistan vs United Arab Emirates: ಈ ಗುರಿ ಬೆನ್ನತ್ತಿದ ಯುಎಇ ಪರ ನಾಯಕ ಮುಹಮ್ಮದ್ ವಸೀಮ್ 29 ಎಸೆತಗಳಲ್ಲಿ 44 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸಿಫ್ ಖಾನ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಪರಿಣಾಮ ಕೊನೆಯ ಓವರ್ನಲ್ಲಿ ಯುಎಇ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು.
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಅಫ್ಘಾನಿಸ್ತಾನ್ ವಿರುದ್ಧದ ಟಿ20 ಪಂದ್ಯದಲ್ಲಿ ಯುಎಇ ತಂಡ ವಿರೋಚಿತವಾಗಿ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನ್ ತಂಡದ ನಾಯಕ ರಶೀದ್ ಖಾನ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಅಫ್ಘಾನಿಸ್ತಾನ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 170 ರನ್ ಕಲೆಹಾಕಿದ್ದರು.
ಈ ಗುರಿ ಬೆನ್ನತ್ತಿದ ಯುಎಇ ಪರ ನಾಯಕ ಮುಹಮ್ಮದ್ ವಸೀಮ್ 29 ಎಸೆತಗಳಲ್ಲಿ 44 ರನ್ ಬಾರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಆಸಿಫ್ ಖಾನ್ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದ್ದರು. ಪರಿಣಾಮ ಕೊನೆಯ ಓವರ್ನಲ್ಲಿ ಯುಎಇ ತಂಡಕ್ಕೆ 17 ರನ್ಗಳ ಅವಶ್ಯಕತೆಯಿತ್ತು.
ಫರೀದ್ ಅಹ್ಮದ್ ಎಸೆದ ಅಂತಿಮ ಓವರ್ನ ಮೊದಲ ಎಸೆತದಲ್ಲೇ ಆಸಿಫ್ ಖಾನ್ ಫೋರ್ ಬಾರಿಸಿದರು. ಮರು ಎಸೆತದಲ್ಲಿ ಸಿಕ್ಸ್ ಸಿಡಿಸಿದರು. ಆ ಬಳಿಕ 2 ರನ್ ಕಲೆಹಾಕಿದರು. ಪರಿಣಾಮ ಕೊನೆಯ ಮೂರು ಎಸೆತಗಳಲ್ಲಿ 5 ರನ್ಗಳ ಅವಶ್ಯಕತೆಯಿತ್ತು. ಆದರೆ ಈ ವೇಳೆ ಎರಡು ಎಸೆತಗಳನ್ನು ಡಾಟ್ ಮಾಡಿದರು. ಇದಾಗ್ಯೂ ಕೊನೆಯ ಎಸೆತದಲ್ಲಿ ಸಿಕ್ಸ್ ಸಿಡಿಸುವ ಪ್ರಯತ್ನ ಮಾಡಿದರೂ ಬೌಂಡರಿ ಲೈನ್ನಲ್ಲಿ ಕ್ಯಾಚ್ ಆದರು. ಈ ಮೂಲಕ 20 ಓವರ್ಗಳಲ್ಲಿ 166 ರನ್ಗಳಿಸಿ ಯುಎಇ ತಂಡ ಕೇವಲ 4 ರನ್ಗಳಿಂದ ವಿರೋಚಿತವಾಗಿ ಸೋಲೊಪ್ಪಿಕೊಂಡಿತು.

