ನೈಸರ್ಗಿಕವಾಗಿ ಬಾಳೆಕಾಯಿ ಹಣ್ಣು ಮಾಡುವ ವಿಧಾನ ಹೇಗೆ? ವಿಡಿಯೋ ನೋಡಿ

Edited By:

Updated on: Aug 21, 2026 | 7:52 PM

ಉಡುಪಿ ಜಿಲ್ಲೆಯಲ್ಲಿ ರಾಸಾಯನಿಕ ಬಳಸಿ ಬಾಳೆಹಣ್ಣು ಪಕ್ವಗೊಳಿಸುವ ದಂಧೆಯ ವಿರುದ್ಧ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕುಂದಾಪುರ ಎಸಿ ರಶ್ಮಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 5,000 ಕೆಜಿ ರಾಸಾಯನಿಕ ಮಿಶ್ರಿತ ಬಾಳೆಹಣ್ಣು ವಶಪಡಿಸಿಕೊಳ್ಳಲಾಗಿದೆ. ನೈಸರ್ಗಿಕವಾಗಿ ಬಾಳೆಹಣ್ಣು ಪಕ್ವಗೊಳಿಸುವ ವಿಧಾನ ಹಾಗೂ ರಾಸಾಯನಿಕ ಬಳಸಿ ತ್ವರಿತವಾಗಿ ಪಕ್ವಗೊಳಿಸುವ ಅಕ್ರಮ ವಿಧಾನದ ನಡುವಿನ ವ್ಯತ್ಯಾಸವನ್ನು ಈ ವರದಿ ವಿವರಿಸುತ್ತದೆ.

ಉಡುಪಿ, ಆಗಸ್ಟ್​ 21: ಉಡುಪಿ ತಾಲೂಕಿನ, ಕೆಮ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಲಿ ಪ್ರದೇಶದಲ್ಲಿ ರಾಸಾಯನಿಕ ಬಳಸಿ ಬಾಳೆಕಾಯಿಗಳನ್ನ ಹಣ್ಣು ಮಾಡಲಾಗ್ತಿತ್ತು. ನಿನ್ನೆ ಗೋದಾಮು ಮೇಲೆ ದಾಳಿ ನಡೆಸಿದ್ದ ಎಸಿ ಎಸ್.ಆರ್.ರಶ್ಮಿ ಮತ್ತು ಆರೋಗ್ಯ ಅಧಿಕಾರಿಗಳು ಬಾಳೆಹಣ್ಣಿಗೆ ಬಳಸುತ್ತಿದ್ದ ಹಾನಿಕಾರಕ ರಾಸಾಯನಿಕಗಳು ವಶಕ್ಕೆ ಪಡೆದಿದ್ದಾರೆ. ವಾಹನ ಹಾಗೂ 5 ಸಾವಿರ ಕೆಜಿ ಹಾನಿಕಾರ ಬಾಳೆಹಣ್ಣನ್ನ ಸೀಜ್ ಮಾಡಿದ್ದಾರೆ. ಬಾಳೆಕಾಯಿಯನ್ನು ಹಣ್ಣು ಮಾಡುವಲ್ಲಿ ಎರಡು ವಿಧಾನಗಳಿವೆ. ನೈಸರ್ಗಿಕ ಮತ್ತು ಕೃತಕ. ಆದಿ ಉಡುಪಿ ಮಾರುಕಟ್ಟೆಯ ಬಳಿ ಇರುವಂತಹ ಹಲವು ವ್ಯಾಪಾರಿಗಳು ಬಾಳೆಹಣ್ಣುಗಳನ್ನು ನೈಸರ್ಗಿಕವಾಗಿ ಪಕ್ವಗೊಳಿಸುತ್ತಾರೆ. ಅವರು ಬಾಳೆಕಾಯಿಗಳನ್ನು ಬೆಳೆಗಾರರಿಂದ ನೇರವಾಗಿ ಪಡೆದು, ತಮ್ಮದೇ ಆದ ಸಂಗ್ರಹಾಗಾರಗಳಲ್ಲಿ ಹಣ್ಣು ಮಾಡುತ್ತಾರೆ. ನೈಸರ್ಗಿಕ ವಿಧಾನದಲ್ಲಿ, ಬಾಳೆಕಾಯಿ ಹಣ್ಣಾಗಲು ಸುಮಾರು 24 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಕಳ್ಳ ಮಾರುಕಟ್ಟೆಯಲ್ಲಿ ಇರುವವರು ಸಂಪೂರ್ಣ ಭಿನ್ನವಾದ ವಿಧಾನವನ್ನು ಅನುಸರಿಸುತ್ತಾರೆ. ತಮ್ಮ ಮನೆಗಳಲ್ಲೇ ಕಡಿಮೆ ಜಾಗದಲ್ಲಿ ರಾಸಾಯನಿಕಗಳನ್ನು ಬಳಸಿ ಬಾಳೆಕಾಯಿಗಳನ್ನು ತ್ವರಿತವಾಗಿ ಹಣ್ಣು ಮಾಡುತ್ತಾರೆ. ತ್ವರಿತ ಲಾಭ ಗಳಿಸುವ ಉದ್ದೇಶದಿಂದ ಹೀಗೆ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us