ಉಗ್ರಾವತಾರ ತೋರಿಸಿ ಬಿಗ್ ಬಾಸ್ ಮನೆಯ ಗ್ಲಾಸ್ ಒಡೆದು ಹಾಕಿದ ಮಂಜು

|

Updated on: Dec 24, 2024 | 7:17 PM

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋನಲ್ಲಿ ಉಗ್ರಂ ಮಂಜು ಅವರು ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಡಿ.24ರ ಎಪಿಸೋಡ್​ನ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ಹಂಚಿಕೊಂಡಿದೆ. ಈ ಸಂಚಿಕೆಯಲ್ಲಿ ಉಗ್ರಂ ಮಂಜು ಅವರು ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ. ಮೋಕ್ಷಿತಾ ಪೈ, ಧನರಾಜ್ ಮುಂತಾದವರ ವಿರುದ್ಧ ಮಂಜು ಗುಡುಗಿದ್ದಾರೆ.

ಉಗ್ರಂ ಮಂಜು ಸಿಕ್ಕಾಪಟ್ಟೆ ಮುಂಗೋಪಿ. ಈಗ ಅವರು ಅನೇಕರ ಮೇಲೆ ಕೋಪ ತೋರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇರುವ ಗ್ಲಾಸ್​ ಒಡೆದು ಹಾಕಿದ್ದಾರೆ. ಹಾಗಂತ ಇದು ಬೇಕಂತಲೇ ಮಾಡಿದ್ದಲ್ಲ. ಈ ವಾರ ಬಿಗ್ ಬಾಸ್ ನೀಡಿದ ವಿಶೇಷ ಟಾಸ್ಕ್​ ಅನುಸಾರ ಉಗ್ರಂ ಮಂಜು ಅವರು ಈ ರೀತಿ ನಡೆದುಕೊಂಡಿದ್ದಾರೆ. ಡಿಸೆಂಬರ್​ 24ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.