ಮಲ್ಟಿಪ್ಲೆಕ್ಸ್​ನಲ್ಲಿ ಇಂಡಿಯಾ-ಪಾಕ್​ ಮ್ಯಾಚ್​ ಪ್ರಸಾರ; ಅನ್ಯಾಯದ ವಿರುದ್ಧ ಗುಡುಗಿದ ಉಮೇಶ್​ ಬಣಕಾರ್​

| Updated By: ಮದನ್​ ಕುಮಾರ್​

Updated on: Aug 28, 2022 | 8:04 PM

ಕೆಲವು ಚಿತ್ರಮಂದಿರ, ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ತೆಗೆದು ಕ್ರಿಕೆಟ್​ ಮ್ಯಾಚ್ ಪ್ರದರ್ಶನ ಮಾಡಲಾಗುತ್ತಿದೆ. ಇದರ ವಿರುದ್ಧ ಉಮೇಶ್ ಬಣಕಾರ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ಬದಲು ಕ್ರಿಕೆಟ್​ ಮ್ಯಾಚ್​ ತೋರಿಸಲು ಕೆಲವು ಮಲ್ಟಿಪ್ಲೆಕ್ಸ್​ಗಳು (Multiplex) ಮುಂದಾಗಿವೆ. ಇದರಿಂದ ನಿರ್ಮಾಪಕರಿಗೆ ಮತ್ತು ವಿತರಕರಿಗೆ ಅನ್ಯಾಯ ಆಗುತ್ತದೆ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್​ ಬಣಕಾರ್​ ಅವರು ಧ್ವನಿ ಎತ್ತಿದ್ದಾರೆ. ‘ವೀಕೆಂಡ್​ನಲ್ಲಿ ಸಿನಿಮಾಗಳಿಗೆ ಹೆಚ್ಚಿನ ಜನರು ಬರುತ್ತಾರೆ. ಈ ಸಮಯದಲ್ಲಿ ಕ್ರಿಕೆಟ್​ ಮ್ಯಾಚ್​ (India Pakistan Match) ಪ್ರದರ್ಶನ ಮಾಡಿದರೆ ಸಿನಿಮಾಗೆ ನಷ್ಟ ಆಗುತ್ತದೆ. ಬೇರೆ ಕಂಟೆಂಟ್​ ಪ್ರದರ್ಶನ ಮಾಡಲು ಇವರಿಗೆ ಅನುಮತಿ ಕೊಟ್ಟವರು ಯಾರು? ನಿರ್ಮಾಪಕರೆಲ್ಲರೂ ಸಭೆ ಸೇರುತ್ತೇವೆ. ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ’ ಎಂದು ಉಮೇಶ್​ ಬಣಕಾರ್​ (Umesh Banakar) ಅವರು ಹೇಳಿದ್ದಾರೆ.