‘ವಾರಂತ್ಯದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿ’; ಉಮೇಶ್ ಬಣಕಾರ್ ಮನವಿ
ಸಿನಿಮಾ ವೀಕ್ಷಣೆಗೆ ಹೆಚ್ಚು ಜನ ಬರೋದು ವೀಕೆಂಡ್ನಲ್ಲಿ. ಆದರೆ, ಅದು ಈಗ ಸಾಧ್ಯವಾಗುತ್ತಿಲ್ಲ. ಇದರಿಂದ ಭಯಬಿದ್ದ ದೊಡ್ಡದೊಡ್ಡ ಚಿತ್ರಗಳು ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿವೆ. ಈ ಬಗ್ಗೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಉಮೇಶ್ ಬಣಕಾರ್ ಮಾತನಾಡಿದ್ದಾರೆ.
ಚಿತ್ರರಂಗಕ್ಕೆ ಕೊರೊನಾ ವೈರಸ್ ಮೂರನೆ ಅಲೆಯ ಕರಿಛಾಯೆ ಬಿದ್ದಿದೆ. ವೀಕೆಂಡ್ ಲಾಕ್ಡೌನ್ ಪರಿಣಾಮ ಸಿನಿಮಾಗಳ ಕಲೆಕ್ಷನ್ ಮೇಲೆ ಹೊಡೆತ ಕೊಟ್ಟಿದೆ. ಸಿನಿಮಾ ವೀಕ್ಷಣೆಗೆ ಹೆಚ್ಚು ಜನ ಬರೋದು ವೀಕೆಂಡ್ನಲ್ಲಿ. ಆದರೆ, ಅದು ಈಗ ಸಾಧ್ಯವಾಗುತ್ತಿಲ್ಲ. ಇದರಿಂದ ಭಯಬಿದ್ದ ದೊಡ್ಡದೊಡ್ಡ ಚಿತ್ರಗಳು ಸಿನಿಮಾ ರಿಲೀಸ್ ದಿನಾಂಕವನ್ನು ಮುಂದೂಡಿವೆ. ಈ ಬಗ್ಗೆ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಉಮೇಶ್ ಬಣಕಾರ್ ಮಾತನಾಡಿದ್ದಾರೆ. ‘ರಿಲೀಸ್ ಆದ ಸಿನಿಮಾಗಳು ನಷ್ಟ ಅನುಭವಿಸಿವೆ. ಈ ಶನಿವಾರ-ಭಾನುವಾರ ಅರ್ಧದಷ್ಟು ಚಿತ್ರಮಂದಿರ ತುಂಬೋಕೆ ಅವಕಾಶ ನೀಡಿ ಎಂದು ನಾನು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ. ಇದರಿಂದ ಸಾಕಷ್ಟು ಸಹಾಯ ಆಗಲಿದೆ’ ಎಂದಿದ್ದಾರೆ ಉಮೇಶ್ ಬಣಕಾರ್.
ಇದನ್ನೂ ಓದಿ: ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ ಎಂದ ಖುಷ್ಬೂ; ಅಂಥದ್ದೇನಾಯ್ತು?
ಖ್ಯಾತ ಹಿರಿಯ ನಟಿಗೆ ಕೊರೊನಾ ಒಮಿಕ್ರಾನ್; ರೂಪಾಂತರಿಯಿಂದ ಆದ ಸಮಸ್ಯೆಗಳನ್ನು ವಿವರಿಸಿದ ಹೀರೋಯಿನ್