ಖ್ಯಾತ ಹಿರಿಯ ನಟಿಗೆ ಕೊರೊನಾ ಒಮಿಕ್ರಾನ್​; ರೂಪಾಂತರಿಯಿಂದ ಆದ ಸಮಸ್ಯೆಗಳನ್ನು ವಿವರಿಸಿದ ಹೀರೋಯಿನ್​

ಖ್ಯಾತ ಹಿರಿಯ ನಟಿಗೆ ಕೊರೊನಾ ಒಮಿಕ್ರಾನ್​; ರೂಪಾಂತರಿಯಿಂದ ಆದ ಸಮಸ್ಯೆಗಳನ್ನು ವಿವರಿಸಿದ ಹೀರೋಯಿನ್​

. ಒಮಿಕ್ರಾನ್​ನಿಂದ ಆಗುವ ಸಮಸ್ಯೆಗಳು ಏನು? ಈ ರೂಪಾಂತರಿಯ ಲಕ್ಷಣ ಏನು ಎಂಬ ಬಗ್ಗೆ ಅಷ್ಟಾಗಿ ಎಲ್ಲರಿಗೂ ಗೊತ್ತಿಲ್ಲ. ಈ ಕಾರಣಕ್ಕೆ ಶೋಭನಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Jan 10, 2022 | 2:51 PM

ಕೊರೊನಾ ಪ್ರಕರಣ (Corona Cases) ಹೆಚ್ಚುತ್ತಿದೆ. ಭಾರತದಲ್ಲಿ ಇಂದು (ಜನವರಿ 10) ಒಂದೇ ದಿನ ಬರೋಬ್ಬರಿ 1.72 ಲಕ್ಷ ಕೊವಿಡ್​ ಕೇಸ್​ ಪತ್ತೆ ಆಗಿದೆ. ಕಳೆದ ವರ್ಷ ಮೇ ಸಂದರ್ಭದಲ್ಲಿ ಇಷ್ಟು ಪ್ರಕರಣ ದಾಖಲಾಗಿತ್ತು. ಹಳೆಯ ದಿನಗಳು ಈಗ ಮರುಕಳಿಸುತ್ತಿವೆ. ಇದರ ಜತೆಗೆ ಕೊರೊನಾ ರೂಪಾಂತರಿ ಒಮಿಕ್ರಾನ್​ (Omicron variant) ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ವೈರಸ್​ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಅವೆಲ್ಲವೂ ಹೊಳೆಯಲ್ಲಿ ಹೋಮ ಮಾಡಿದಂತಾಗುತ್ತಿದೆ. ಕೆಲವರು ಸೂಕ್ತ ಮುಂಜಾಗೃತ ಕ್ರಮ ಕೈಗೊಂಡರೂ ಕೊವಿಡ್​ ಅಂಟುತ್ತಿದೆ. ಕನ್ನಡ ಸೇರಿ ದಕ್ಷಿಣದ ಹಲವು ಭಾಷೆಗಳಲ್ಲಿ ಬಣ್ಣ ಹಚ್ಚಿದ ನಟಿಗೆ ಒಮಿಕ್ರಾನ್​ ಅಂಟಿದೆ. ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ.

ಹಿರಿಯ ನಟಿ ಶೋಭನಾ ಅವರಿಗೆ ಕೊವಿಡ್​ ರೂಪಾಂತರಿ ಒಮಿಕ್ರಾನ್​ ಅಂಟಿದೆ. ಒಮಿಕ್ರಾನ್​ನಿಂದ ಆಗುವ ಸಮಸ್ಯೆಗಳು ಏನು? ಈ ರೂಪಾಂತರಿಯ ಲಕ್ಷಣ ಏನು ಎಂಬ ಬಗ್ಗೆ ಅಷ್ಟಾಗಿ ಎಲ್ಲರಿಗೂ ಗೊತ್ತಿಲ್ಲ. ಈ ಕಾರಣಕ್ಕೆ ಶೋಭನಾ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

‘ನಾನು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ ಓಮಿಕ್ರಾನ್‌ಗೆ ತುತ್ತಾಗಿದ್ದೇನೆ. ಕೀಲುಗಳಲ್ಲಿ ನೋವಿದೆ. ಶೀತ ಉಂಟಾಗಿದೆ. ಗಂಟಲಿನಲ್ಲಿ ತುರಿಕೆ ಇದೆ. ಗಂಟಲು ಸ್ವಲ್ಪ ನೋಯುತ್ತಿದೆ. ಇದು ಮೊದಲ ದಿನದ ಲಕ್ಷಣಗಳು. ಪ್ರತಿದಿನ ನನ್ನ ರೋಗಲಕ್ಷಣಗಳು ಬಹಳವಾಗಿ ಕಡಿಮೆಯಾಗುತ್ತಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಲಸಿಕೆ ಪಡೆದವರಿಗೆ ಕೊರೊನಾ ಹಾನಿ ಮಾಡುವುದು ಕಡಿಮೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ, ಅನೇಕ ಸೆಲೆಬ್ರಿಟಿಗಳು ಇದನ್ನು ಒತ್ತಿ ಹೇಳಿದ್ದಾರೆ. ಶೋಭನಾ ಕೂಡ ಇದೇ ಮಾತನ್ನು ಪುನರುಚ್ಚರಿಸಿದ್ದಾರೆ.  ಕೊವಿಡ್​ ಲಸಿಕೆ ಪಡೆದು ಈ ಸಾಂಕ್ರಾಮಿಕದಿಂದ ಪಾರಾಗಿ ಎಂದು ಅವರು ಕೋರಿದ್ದಾರೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದಲ್ಲಿ ಇಂದು 1,79,723 ಕೊರೊನಾ ವೈರಸ್ ಪ್ರಕರಣ ದಾಖಲಾಗಿದೆ. ಇದರಲ್ಲಿ 4,033 ಒಮಿಕ್ರಾನ್ ರೂಪಾಂತರಿ ಪ್ರಕರಣಗಳು ಸೇರಿವೆ.  ಈ ಮೂಲಕ ಭಾರತದ ಕೊವಿಡ್​ ಪ್ರಕರಣಗಳ ಸಂಖ್ಯೆ 3,57,07,727 ಆಗಿದೆ.

ಶೋಭನಾ ಮಲಯಾಳಂ ಸಿನಿಮಾದಲ್ಲಿ ಹೆಚ್ಚು ಕಾಣಿಸಿಕೊಂಡಿದ್ದಾರೆ. 1985ರಲ್ಲಿ ತೆರೆಗೆ ಬಂದ ಕನ್ನಡದ ‘ಗಿರಿ ಬಾಲೆ’ ಹಾಗೂ 1990ರ ‘ಶಿವಶಂಕರ’ ಚಿತ್ರದಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: Vikram Vedha: ‘ವಿಕ್ರಮ್ ವೇದ’ ಚಿತ್ರದ ಹೃತಿಕ್​ ರೋಷನ್​ ಲುಕ್​ ರಿವೀಲ್​; ಫ್ಯಾನ್ಸ್​ ಫಿದಾ

‘ಪುಷ್ಪ 2’ ಚಿತ್ರಕ್ಕಾಗಿ ಈಗಲೇ ಐಟಂ ಸಾಂಗ್​ ಸಿದ್ಧಪಡಿಸಲು ಮುಂದಾದ ನಿರ್ದೇಶಕ; ಈ ಬಾರಿ ಸಮಂತಾಗಿಲ್ಲ ಚಾನ್ಸ್​

Follow us on

Related Stories

Most Read Stories

Click on your DTH Provider to Add TV9 Kannada