ಈ ಜನರಿಗೆ ಗಮ್ಯದ ಬಗ್ಗೆ ಖಾತರಿಯಿಲ್ಲ, ಜೀವ ಉಳಿದರೆ ಸಾಕೆಂಬ ಭಾವದೊಂದಿಗೆ ಸುಮ್ಮನೆ ನಡೆದು ಹೋಗುತ್ತಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 02, 2021 | 12:01 AM

ಅಫ್ಘಾನಿಸ್ತಾನದಿಂದ ಇರಾನ್ 1,300 ಕಿಲೋಮೀಟರ್ಗಳಿಗಿಂತ ಜಾಸ್ತಿ ದೂರದಲ್ಲಿದೆ. ಟ್ರೇನಿನಲ್ಲಿ ಹೋದರೆ ಕನಿಷ್ಠ ಮೂರು ದಿನ ಬೇಕು. ಮೋಟಾರು ವಾಹನಗಳಲ್ಲಿ ಹೋದರೂ ಮೂರು ದಿನ ಬೇಕು. ನಡೆದು ಹೋಗಬೇಕಾದರೆ ತಿಂಗಳುಗಳು ಬೇಕು. ಈ ಗುಂಪುಗಳಲ್ಲಿ ಹೆಣ್ಣು ಮಕ್ಕಳು ಮತ್ತು ಚಿಕ್ಕ ಮಕ್ಕಳು ಸಹ ಇದ್ದಾರೆ

ಈ ವಿಡಿಯೋ ನೋಡಿ. ಗಿಡಮರಗಳು ಸಹ ಗತಿಯಿಲ್ಲದ ಬರಡು ಪ್ರದೇಶದಲ್ಲಿ ಜನ ನಡೆದು ಹೋಗುತ್ತಿದ್ದಾರೆ, ಇವರು ಆಫ್ಘನ್ನರು ಅಂತ ಬೇರೆ ಹೇಳಬೇಕಿಲ್ಲ. ಇವರೆಲ್ಲರ ಗುರಿಯೊಂದೇ. ಜೀವ ಉಳಿಸಿಕೊಳ್ಳಲು ತಮ್ಮ ತಾಯ್ನಾಡನ್ನು ತ್ಯಜಿಸಿ ತಮ್ಮನ್ನು ಬರಮಾಡಿಕೊಳ್ಳಬಹುದಾದ ನೆರೆ ದೇಶಕ್ಕೆ ಹೋಗಿ ಅಲ್ಲಿ ಹೊಸ ಬದುಕನ್ನು ಕಂಡುಕೊಳ್ಳುವುದು ಅಥವಾ ಜೀವನವನ್ನು ಶೂನ್ಯದಿಂದ ಹೊಸದಾಗಿ ಆರಂಭಿಸುವುದು. ಈ ಜನ ಇರಾನ್ ದೇಶಕ್ಕೆ ನಡೆದು ಹೋಗುತ್ತಿದ್ದಾರೆ. ಕಾಬೂಲ ನಗರದ ಎಡಕ್ಕೆ ಅಂದರೆ ಪಶ್ಚಿಮದ ಕಡೆ ಹೋದರೆ ಅವರು ಪಾಕಿಸ್ತಾನ ತಲುಪಿಕೊಳ್ಳುತ್ತಾರೆ, ನೇರವಾಗಿ ಅಂದರೆ ಉತ್ತರದ ಕಡೆ ಹೊರಟರೆ ಇರಾನ್ ತಲುಪುತ್ತಾರೆ. ಎರಡೂ ದುರ್ಗಮ ರಸ್ತೆಗಳೇ. ಆದರೆ, ಜೀವದಿಂದ ಉಳಿಯಬೇಕು ಅಂತಾದರೆ ಈ ರಿಸ್ಕ್ ತೆಗೆದುಕೊಳ್ಳದೆ ವಿಧಿಯಿಲ್ಲ.

ಆದರೆ, ಯೋಚಿಸಬೇಕಾದ ಸಂಗತಿಯೆಂದರೆ, ಅಫ್ಘಾನಿಸ್ತಾನದಿಂದ ಇರಾನ್ 1,300 ಕಿಲೋಮೀಟರ್ಗಳಿಗಿಂತ ಜಾಸ್ತಿ ದೂರದಲ್ಲಿದೆ. ಟ್ರೇನಿನಲ್ಲಿ ಹೋದರೆ ಕನಿಷ್ಠ ಮೂರು ದಿನ ಬೇಕು. ಮೋಟಾರು ವಾಹನಗಳಲ್ಲಿ ಹೋದರೂ ಮೂರು ದಿನ ಬೇಕು. ನಡೆದು ಹೋಗಬೇಕಾದರೆ ತಿಂಗಳುಗಳು ಬೇಕು. ಈ ಗುಂಪುಗಳಲ್ಲಿ ಹೆಣ್ಣು ಮಕ್ಕಳು ಮತ್ತು ಚಿಕ್ಕ ಮಕ್ಕಳು ಸಹ ಇದ್ದಾರೆ. ರಸ್ತೆಯಲ್ಲಿ ಬೇರೆ ಊರುಗಳು ಸಿಕ್ಕಬಹುದು, ಅವರಿಗೆ ರಾತ್ರಿ ಕಳೆಯಲು ಸ್ಥಳವೂ ಸಿಕ್ಕಬಹುದು, ಆದರೆ ಮಕ್ಕಳು ಮತ್ತು ಮಹಿಳೆಯರು 1,300 ಕಿಮೀ ನಡೆಯುವುದು ಸಾಧ್ಯವೇ? ಖಂಡಿತ ಇಲ್ಲ.

ಕೆಲ ಜನ ಪಾಕಿಸ್ತಾನದ ಕಡೆಯೂ ಹೋಗುತ್ತಿದ್ದಾರೆ. ಅದು 450 ಕಿಮೀ ದೂರದಲ್ಲಿದೆ. ಇರಾನ್ನ 1/3 ರಷ್ಟು ಮಾತ್ರ ದೂರ. ಆದರೆ, ನಡೆಯುತ್ತಾ ಕ್ರಮಿಸಬಹುದಾದ ಅಂತರವೇ ಅದು? ಮಕ್ಕಳ ಗತಿಯೇನು?

ಇನ್ನೂ ಚಿಂತೆಯ ವಿಷಯವೆಂದರೆ, ಅಫಘಾನಿಸ್ತಾನದಿಂದ ಬರುವ ಜನರನ್ನು ಸೇರಿಸಿಕೊಳ್ಳುವುದಿಲ್ಲ ಎಂದು ಇರಾನ್ ಮತ್ತು ಪಾಕಿಸ್ತಾನ ಎರಡೂ ಹೇಳಿವೆ. ಈ ಜನ ಅಲ್ಲಿಯವರೆಗೆ ಹೋದ ಮೇಲೆ ಈ ದೇಶಗಳು ಗಡಿಗಳನ್ನು ಮುಚ್ಚಿಬಿಟ್ಟರೆ ಹೇಗೆ? ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಎರಡೂ ದೇಶಗಳ ಗಡಿಬಾಗಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದನ್ನೂ ಓದಿ:  ಕಲಬುರಗಿಯ ಶರಣಬಸವೇಶ್ವರ ದೇವಾಲಯದ ನಂದಾದೀಪದ ಬಗ್ಗೆ ನಿಮಗೆ ಗೊತ್ತಾ? ವಿಡಿಯೋ ನೋಡಿ

Follow us on