ಊಟದಲ್ಲಿ ಹುಳ ಕಂಡು ಹೌಹಾರಿದ ಯುವತಿಯರು: ಪಿಜಿ ಮಾಲೀಕನ ವಿರುದ್ಧ ಪ್ರತಿಭಟನೆ

Edited By:

Updated on: Jun 12, 2026 | 11:51 AM

ಬಸವೇಶ್ವರ ನಗರದ ಅಂಜನಾದ್ರಿ ಪಿಜಿಯಲ್ಲಿ ಊಟದಲ್ಲಿ ಹುಳ ಪತ್ತೆಯಾಗಿದ್ದರಿಂದ ಯುವತಿಯರು ಪ್ರತಿಭಟನೆ ನಡೆಸಿದ್ದಾರೆ. ಕಳಪೆ ಆಹಾರದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಪಿಜಿ ಮಾಲೀಕರು ಯುವತಿಯರಿಗೆ ಪಿಜಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಪದೇ ಪದೇ ಇಂತಹ ಘಟನೆಗಳು ಸಂಭವಿಸುತ್ತಿದ್ದರೂ, ಮಾಲೀಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಯುವತಿಯರು ಆರೋಪಿಸಿದ್ದಾರೆ. ರಾತ್ರೋರಾತ್ರಿ ಪಿಜಿಯಿಂದ ಹೊರಬಂದು ಧರಣಿ ಕುಳಿತ ಯುವತಿಯರು, ಆಹಾರದ ಗುಣಮಟ್ಟ ಸುಧಾರಣೆಗೆ ಆಗ್ರಹಿಸಿದ್ದಾರೆ.

ಬೆಂಗಳೂರು, ಜೂನ್​​ 12: ಬಸವೇಶ್ವರ ನಗರದಲ್ಲಿರುವ ಅಂಜನಾದ್ರಿ ಮಹಿಳಾ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿದ್ದು, ಇದರಿಂದ ಆಕ್ರೋಶಗೊಂಡ ಯುವತಿಯರು ಪ್ರತಿಭಟನೆ ನಡೆಸಿದ್ದಾರೆ. ಊಟದಲ್ಲಿ ಹುಳ ಪತ್ತೆಯಾದ ಬಗ್ಗೆ ಪ್ರಶ್ನಿಸಿದ್ದಕ್ಕೆ, ಪಿಜಿ ಮಾಲೀಕರು ಯುವತಿಯರೊಂದಿಗೆ ಕಿರಿಕ್ ಮಾಡಿ, ಪಿಜಿ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಕೆಲವು ದಿನಗಳ ಹಿಂದೆಯೂ ಸಹ ಇದೇ ಪಿಜಿಯ ಊಟದಲ್ಲಿ ಹುಳ ಪತ್ತೆಯಾಗಿತ್ತು. ಪದೇ ಪದೇ ಇಂತಹ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿರುವುದನ್ನು ಪ್ರಶ್ನಿಸಿದ ಯುವತಿಯರಿಗೆ, ಮಾಲೀಕರು ನೀವು ಕೊಡುವ 5,000 ರೂಪಾಯಿಗೆ ನಾವು ಉತ್ತಮ ಆಹಾರ ನೀಡಬೇಕೇ? ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ. ನಿನ್ನೆ ಬೆಳಿಗ್ಗೆ ದೋಸೆ ಬೇಯದಿದ್ದ ಕುರಿತು ಪ್ರಶ್ನಿಸಿದಾಗಲೂ ಮಾಲೀಕರು ಯುವತಿಯರೊಂದಿಗೆ ಸರಿಯಾಗಿ ಮಾತನಾಡಿಲ್ಲ ಎಂದು ಯುವತಿಯರು ಹೇಳಿದ್ದಾರೆ. ಮಾಲೀಕರ ವರ್ತನೆಯಿಂದ ಬೇಸತ್ತ ಯುವತಿಯರು ತಡರಾತ್ರಿ ಪಿಜಿಯಿಂದ ಹೊರಬಂದು ಧರಣಿ ಕುಳಿತಿದ್ದಾರೆ. ಆಹಾರದ ಗುಣಮಟ್ಟ ಸುಧಾರಿಸುವಂತೆ ಮತ್ತು ಮಾಲೀಕರ ದುರ್ವರ್ತನೆಗೆ ಕಡಿವಾಣ ಹಾಕುವಂತೆ ಯುವತಿಯರು ಆಗ್ರಹಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Loading...
Unable to load recommendations.
Follow Us
ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More