ಹಾವೇರಿ ಜಿಲ್ಲೆಯಲ್ಲಿ ಡ್ಯಾನ್ಸ್ ಮಾಸ್ಟರ್ ಎಂದು ಖ್ಯಾತನಾಗಿದ್ದ ಲಿಂಗೇಶ್ ಹತ್ಯೆ, ರಾ ಹೆ 48ರಲ್ಲಿ ಬರ್ಬರ ಕೃತ್ಯ
ಮಾಧ್ಯಮಗಳೊಂದಿಗೆ ಮಾತಾಡಿರುವ ಅಂಜಲಿ, ತನ್ನೊಂದಿಗೆ ತಮ್ಮ ಹೆಚ್ಚು ಮಾತಾಡುತ್ತಿರಲಿಲ್ಲ, ಅವನಿಗೆ ದುಡ್ಡು ಬೇಕಾದಾಗ ಮಾತ್ರ ಫೋನ್ ಮಾಡುತ್ತಿದ್ದ, ಯಾರೋ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕನೊಂದಿಗೆ ತಮ್ಮನಿಗೆ ಜಗಳವಿತ್ತು, ಅದನ್ನು ಅವನು ತನ್ನ ಮುಂದೆ ಹೇಳಿರಲಿಲ್ಲ, ಅದರೆ ಅಮ್ಮನ ಮುಂದೆ ಹೇಳಿದ್ದ, ಅಮ್ಮ ತನಗೆ ತಿಳಿಸಿದ್ದರು ಎಂದು ಹೇಳಿದರು.
ಹಾವೇರಿ, ಆಗಸ್ಟ್ 25: ಬ್ಯಾಡಗಿಯ ಡ್ಯಾನ್ಸ್ ಮಾಸ್ಟರ್ ಲಿಂಗೇಶ್ ಕೊಲೆಗೆ ವೃತ್ತಿ ವೈಷಮ್ಯ (professional rivalry) ಕಾರಣವೋ ಅಥವಾ ಬೇರೆ ಏನಾದರೂ ಇತ್ತೋ ಅಂತ ಬ್ಯಾಡಗಿಯ ಪೊಲೀಸರ ತನಿಖೆಯ ನಂತರವೇ ಗೊತ್ತಾಗಬೇಕು. ನುರಿತ ಡ್ಯಾನ್ಸರ್ ಆಗಿದ್ದ ಮತ್ತು ಸುತ್ತಮುತ್ತಲಿನ ಊರುಗಳಲ್ಲಿ ಡ್ಯಾನ್ಸ್ ಮಾಸ್ಟರ್ ಅಂತ ಗುರುತಿಸಿಕೊಂಡಿದ್ದ ಲಿಂಗೇಶ್ ರನ್ನು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಬರುವ ಮೋಟೆಬೆನ್ನೂರು ಎಂಬಲ್ಲಿ ಇಂದು ಮಧ್ಯಾಹ್ನ ಭೀಕರವಾಗಿ ಕೊಲೆ ಮಾಡಲಾಗಿದೆ. ಹಂತಕರು ಲಿಂಗೇಶ್ ಕತ್ತು ಕುಯ್ದ್ದು ಪರಾರಿಯಾಗಿದ್ದಾರೆ. ವಿಷಯ ತಿಳಿದ ಕೂಡಲೇ ಹರಿಹರದಿಂದ ತವರುಮನೆಗೆ ಧಾವಿಸಿರುವ ಲಿಂಗೇಶ್ ಅಕ್ಕ ಅಂಜಲಿಯವರನ್ನು ಸಹೋದರನ ಗೆಳೆಯರು ಸಂತೈಸುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಲಿಂಗೇಶ್ ತಾಯಿ ಆಘಾತಕ್ಕೊಳಗಾಗಿ ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಇದನ್ನೂ ಓದಿ: ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
