ಎಮ್ ಪಿ ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ, ಆಸ್ಪತ್ರೆಗೆ ದಾಖಲು

ಎಮ್ ಪಿ ರೇಣುಕಾಚಾರ್ಯ ಆಪ್ತ ಸಹಾಯಕನ ಮೇಲೆ ಅಪರಿಚಿತ ದುಷ್ಕರ್ಮಿಗಳಿಂದ ಹಲ್ಲೆ, ಆಸ್ಪತ್ರೆಗೆ ದಾಖಲು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 18, 2022 | 10:57 AM

ಸೋಮವಾರ ರಾತ್ರಿ ಸುಮಾರು 10.30 ನಿಮಿಷಕ್ಕೆ ಕೆಲ ದುಷ್ಕರ್ಮಿಗಳು ಪ್ರಜ್ವಲ್ ಮೇಲೆ ಹಲ್ಲೆ ನಡೆಸಿದ್ದು ಗಾಯಗೊಂಡಿರುವ ಅವರನ್ನು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.

ದಾವಣಗೆರೆ: ಹೊನ್ನಾಳಿ  ಶಾಸಕ ಎಮ್ ಪಿ ರೇಣುಕಾಚಾರ್ಯ (MP Renukacharya) ಅವರ ಆಪ್ತ ಸಹಾಯಕ ಮೇಲೆ ಹಲ್ಲೆ ನಡೆದಿದೆ. ಸೋಮವಾರ ರಾತ್ರಿ ಸುಮಾರು 10.30 ನಿಮಿಷಕ್ಕೆ ಕೆಲ ದುಷ್ಕರ್ಮಿಗಳು (miscreants) ಪ್ರಜ್ವಲ್ (Prajwal) ಮೇಲೆ ಆಕ್ರಮಣ ನಡೆಸಿದ್ದು ಗಾಯಗೊಂಡಿರುವ ಅವರನ್ನು ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಸೇರಿಸಲಾಗಿದೆ. ವಿಷಯ ಗೊತ್ತಾದ ಕೂಡಲೇ ರೇಣುಕಾಚಾರ್ಯ ಅಸ್ಪತ್ರೆಗೆ ಧಾವಿಸಿ ಪ್ರಜ್ವಲ್ ಆರೋಗ್ಯ ವಿಚಾರಿಸಿದರು. ನಂತರ ಶಾಸಕರು ಪೊಲೀಸರಿಗೆ ಫೋನ್ ಮಾಡಿ ಆದಷ್ಟು ಬೇಗ ಹಲ್ಲೆಕೋರರನ್ನು ಬಂಧಿಸುವಂತೆ ಹೇಳಿದರು.