ಊಟಕ್ಕಾಗಿ ಬ್ರೇಕ್ ತೆಗೆದುಕೊಳ್ಳದೆ ಜನತಾ ದರ್ಶನದಲ್ಲಿ ಜನರ ಸಮಸ್ಯೆ ಆಲಿಸಿದ ಹೆಚ್ ಡಿ ಕುಮಾರಸ್ವಾಮಿ
ಇದೇ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸಿದಂತೆ ಸಿದ್ದರಾಮಯ್ಯ ಸರ್ಕಾರ ತನ್ನ ಅಧಿಕಾರಿಗಳನ್ನು ತಡೆದಿದೆ ಎಂದು ಕುಮಾರಸ್ವಾಮಿ ಇಂದು ಬೆಳಗ್ಗೆ ಮಾಧ್ಯಮದವರ ಮುಂದೆ ಹೇಳಿದ್ದರು. ಅಧಿಕಾರಿಗಳ ಗೈರುಹಾಜರಿ ಎದ್ದು ಕಾಣಿತಿತ್ತು. ಅವರು ಉಪಸ್ಥಿತರಿದ್ದರೆ ಕುಮಾರಸ್ವಾಮಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಬಹುದಿತ್ತು.
ಮಂಡ್ಯ: ಅಧಿಕಾರಿಗಳ ಗೈರು ಹಾಜರಿಯಲ್ಲೇ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ನಗರದ ಅಂಬೇಡ್ಕರ್ ಭವನದಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಜನರ ದೂರ ದುಮ್ಮಾನಗಳನ್ನು ಆಲಿಸಿದರು. ಜನ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರಿಂದ ಕುಮಾರಸ್ವಾಮಿಯವರಿಗೆ ಲಂಚ್ ಗಾಗಿ ಬ್ರೇಕ್ ತೆಗೆದುಕೊಳ್ಳುವುದು ಸಹ ಸಾಧ್ಯವಾಗಲಿಲ್ಲ ಜನರ ಸಮಸ್ಯೆಗಳನ್ನು ಆಲಿಸುತ್ತಾ ಅವರು ಊಟ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸಚಿವ ಊಟ ಮಾಡುತ್ತಿದ್ದಾರೆ ಅವರಿಗೆ ತೊಂದರೆ ಕೊಡೋದು ಬೇಡ ಅಂತ ಜನ ಅವರ ಬಳಿ ಹೋಗಲು ಹಿಂಜರಿಯುತ್ತಿದ್ದಾಗ ಕುಮಾರಸ್ವಾಮಿಯವರೇ ಅವರನ್ನು ಕೈಯಿಂದ ಸನ್ನೆ ಮಾಡಿ ಬನ್ನಿ ಅಂತ ಕರೆದರು. ಇವತ್ತಿನ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವನೊಂದಿಗೆ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಡಿಸಿ ತಮ್ಮಣ್ಣ, ಮಾಜಿ ಶಾಸಕ ಶ್ರೀಕಂಠಯ್ಯ, ಅನ್ನದಾನಿ, ಸುರೇಶ್ ಗೌಡ ಮೊದಲಾದವರು ಇದ್ದರು. ಕುಮಾರಸ್ವಾಮಿ ಜನರ ಸಮಸ್ಯೆಗಳನ್ನು ಆಲಿಸುವ ಜೊತೆಗೆ ಮನವಿ ಪತ್ರಗಳನ್ನೂ ಸ್ವೀಕರಿಸಿದರು. ಶಾಲೆಯೊಂದರ ಮಕ್ಕಳು ಸಹ ತಮ್ಮ ದೂರನ್ನು ಅವರಲ್ಲಿ ಹೇಳಿಕೊಂಡಿದ್ದು ವಿಶೇಷವೆನಿಸಿತು..
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಅಧಿಕಾರಿಗಳು ಶಿಷ್ಟಾಚಾರವನ್ನಷ್ಟೇ ಪಾಲಿಸುತ್ತಾರೆ, ಕುಮಾರಸ್ವಾಮಿ ಹಳ್ಳಿಗಳಿಗೆ ಹೋದರೆ ಅವರೊಂದಿಗೆ ಹೋಗುತ್ತಾರೆ: ಶಿವಕುಮಾರ್