ರಾಜ್ಯದ ಅತಿ ಉದ್ದದ ಸಿಗಂದೂರು ತೂಗುಸೇತುವೆ ಲೋಕಾರ್ಪಣೆಗೊಳಿಸಿದ ಸಚಿವ ಗಡ್ಕರಿ

Updated on: Jul 14, 2025 | 2:35 PM

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು ಮತ್ತು ಕಳಸವಳ್ಳಿ ನಡುವೆ ನಿರ್ಮಿಸಲಾದ 430 ಕೋಟಿ ರೂ. ವೆಚ್ಚದ ಹೊಸ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಿದ್ದಾರೆ. ಇದರಿಂದ ಈ ಪ್ರದೇಶದ ಜನರಿಗೆ ದಶಕಗಳ ಬವಣೆ ಕೊನೆಗೊಂಡಿದೆ. 100 ಕಿ.ಮೀ. ಸುತ್ತುವ ದೂರ ಈಗ ಅರ್ಧಕ್ಕೆ ಇಳಿದಿದೆ. ಏಳು ವರ್ಷಗಳಲ್ಲಿ ಸೇತುವೆ ನಿರ್ಮಾಣ ಪೂರ್ಣಗೊಂಡಿದೆ.

ಶಿವಮೊಗ್ಗ, ಜುಲೈ 14: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆಯನ್ನು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಶರಾವತಿ ಹಿನ್ನೀರ ಪ್ರದೇಶದ ಜನರ ಹಲವು ದಶಕಗಳ ಬವಣೆ ತಪ್ಪಿದೆ. ಸಾಗರದಿಂದ ತಮರಿ ಅಥವಾ ಸಿಗಂದೂರಿಗೆ ತೆರಳು ರಸ್ತೆ ಮಾರ್ಗವಾಗಿ 100 ಕಿಮೀ ಸುತ್ತಿಬಳಸಿ ಹೋಗಬೇಕಿತ್ತು. ಇಲ್ಲವೇ ಲಾಂಚ್​ನಲ್ಲಿ ತೆರಳಬೇಕಿತ್ತು. ಹೊಸ ಸೇತುವೆಯಿಂದ ಅಂತರ ಅರ್ಧದಷ್ಟು ತಗ್ಗಿದೆ. ಸೇತುವೆ ಅಂದಾಜು 430 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸೇತುವೆ ಕಾಮಗಾರಿ ಕೇವಲ ಏಳು ವರ್ಷಗಳಲ್ಲಿ ಪೂರ್ಣಗೊಂಡಿದೆ.

ಇದನ್ನೂ ನೋಡಿ: ಸಿಂಗಾರಗೊಂಡು ಕಂಗೊಳಿಸುತ್ತಿದೆ ಸಿಗಂದೂರು ಸೇತುವೆ, ವಿಡಿಯೋ ಇಲ್ಲಿದೆ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ