Loading video

ಬಸನಗೌಡ ಯತ್ನಾಳ್ ವಿಷಯದಲ್ಲಿ ಹೆಚ್ಚು ಮಾತಾಡಲಿಚ್ಛಿಸದ ಕೇಂದ್ರ ಸಚಿವ ವಿ ಸೋಮಣ್ಣ

|

Updated on: Mar 29, 2025 | 5:22 PM

ದೂರದೃಷ್ಟಿ ಚಿಂತನೆ ಇರುವ ನರೇಂದ್ರ ಮೋದಿಯವರ ಮೂರನೇ ಬಾರಿ ಪ್ರಧಾನಿಯಾಗಿ ಹಲವಾರು ಕೊಡುಗೆಗಳನ್ನು ನೀಡುತ್ತಿದ್ದಾರೆ, ಅವುಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸುವ ಕೆಲಸವನ್ನು ಮಾಡೋಣ, ಪಕ್ಷದ ಸಂದೇಶ, ಸೂಚನೆ ಇವುಗಳಿಗೆ ಮಾತ್ರ ನಮ್ಮ ಕಾರ್ಯವ್ಯಾಪ್ತಿ ಸೀಮಿತವಾಗಿರಬೇಕು ಎಂದು ಕೇಂದ್ರ ಸಚಿವ ವಿ ಸೋಮಣ್ಣ ಹೇಳಿದರು.

ತುಮಕೂರು, ಮಾರ್ಚ್ 19: ಸಿದ್ಧಗಂಗಾ ಮಠದ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ವಿ ಸೋಮಣ್ಣ ಅವರು ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಉಚ್ಚಾಟನೆ ಬಗ್ಗೆ ಕೇಳಿದಾಗ ಪವಿತ್ರವಾದ ಸ್ಥಳದಲ್ಲಿ ನಿಂತು ಒಳ್ಳೆಯ ಮಾತುಗಳನ್ನು ಮಾತ್ರ ಆಡೋಣ, ಯಾವ ವಿಷಯಕ್ಕೆ ಎಲ್ಲಿ ಆದ್ಯತೆ ನೀಡಬೇಕೋ ಅಲ್ಲಿ ನೀಡೋಣ, ಸೋಮಣ್ಣ ಈಗ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿದ್ದಾನೆ, ಯಡಿಯೂರಪ್ಪ ನಮ್ಮ ನಾಯಕ, ಯತ್ನಾಳ್ ಗೆ ಹಿನ್ನಡೆಯಾಗಿದೆ, ಬಾಯಿ ಭದ್ರವಾಗಿಟ್ಟುಕೊಳ್ಳಲು ನಮಗೊಂದು ಪಾಠ ಎಂದು ಹೇಳಿದರು.

ಇದನ್ನೂ ಓದಿ:  ಸಿಟಿ ರವಿ ಕೇಸ್​ ಬೆಳೆಸುವುದು ಬೇಡವೆಂದು ಸಿಎಂ, ಗೃಹ ಸಚಿವರು ಹೇಳಿಲ್ವಾ? ವಿ ಸೋಮಣ್ಣ ಹೊಸ ಬಾಂಬ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ