ಎಫ್ಐಆರ್ ನಲ್ಲಿ ಇಬ್ಬರು ಶಾಸಕರ ಹೆಸರು ಸೇರಿಸದ ಹೊರತು ವಿನಯ್ ಬಾಡಿ ಮೂವ್ ಮಾಡಲ್ಲ: ವಿನಯ್ ಸಹೋದರ
ವಿನಯ್ ತನ್ನ ಮರಣ ಪತ್ರದಲ್ಲಿ ನಾಲ್ವರ ಹೆಸರುಗಳನ್ನು ಉಲ್ಲೇಖಿಸಿದ್ದಾನೆ, ವಿರಾಜಪೇಟೆ ಶಾಸಕ ಪೊನ್ನಣ್ಣ, ಮಡಿಕೇರಿ ಶಾಸಕ ಮಂಥರ್ ಗೌಡ, ಹರೀಶ್ ಬೋಯ ಮತ್ತು ತನ್ನೆರಾ ಮಹೀನ್. ಆದರೆ ಮೊದಲ ಮೂರು ಹೆಸರುಗಳು ನಾಪತ್ತೆಯಾಗಿವೆ. ದೂರಿನಲ್ಲಿ ನಾವು ಹೊಸದಾಗಿ ಯಾರ ಹೆಸರನ್ನೂ ಸೇರಿಸಿಲ್ಲ, ಡೆತ್ ನೋಟ್ನಲ್ಲಿ ಉಲ್ಲೇಖವಾಗಿರುವ ಹೆಸರುಗಳನ್ನು ಮಾತ್ರ ದಾಖಲಿಸಿದ್ದೇವೆ ಎಂದು ವಿನಯ್ ಸಹೋದರ ಹೇಳುತ್ತಾರೆ.
ಬೆಂಗಳೂರು, ಏಪ್ರಿಲ್ 4: ಆತ್ಮಹತ್ಯೆಯ ಮೂಲಕ ಸಾವಿಗೆ ಶರಣಾಗಿರುವ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅವರ ಸಹೋದರ ಮಾಧ್ಯಮಗಳಿಗೆ ನೀಡಿರುವ ಹೇಳಿಕೆ ಪ್ರಕಾರ, ವಿನಯ್ ಡೆತ್ ನೋಟನ್ನು ಆಧರಿಸಿ ನಾಲ್ವರ ವಿರುದ್ಧ ಹೆಣ್ಣೂರು ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಾಗಿಸಿದ್ದರೂ ಎಫ್ಐಆರ್ ಪ್ರತಿಯಲ್ಲಿ ಕೇವಲ ಒಬ್ಬರ ಹೆಸರು ಮಾತ್ರ ಇದೆ. ಡೆತ್ ನೋಟ್ ನಲ್ಲಿರುವ ಎಲ್ಲ ನಾಲ್ವರ ಹೆಸರನ್ನು ಎಫ್ಐಅರ್ ನಲ್ಲಿ ಸೇರಿಸದ ಹೊರತು ವಿನಯ್ ಪಾರ್ಥೀವ ಶರೀರವನ್ನು ಪೋಸ್ಟ್ ಮಾರ್ಟಮ್ ನಡೆದಿರುವ ಸ್ಥಳದಿಂದ ಕದಲಿಸುವುದಿಲ್ಲವೆಂದು ವಿನಯ್ ಸಹೋದರ ಖಡಾಖಂಡಿತವಾಗಿ ಹೇಳುತ್ತಾರೆ.
ಇದನ್ನೂ ಓದಿ: ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಬಿಜೆಪಿ ನಾಯಕರಿಗೆ ಹೊಸದೇನೂ ಅಲ್ಲ: ಎಎಸ್ ಪೊನ್ನಣ್ಣ, ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ