ಕಾಂಗ್ರೆಸ್ ಪಕ್ಷದಲ್ಲಿದ್ದಂತೆ ನಮ್ಮಲ್ಲಿ ಒಳಜಗಳಗಳಿಲ್ಲ, ನಮ್ಮದು ಬಲಿಷ್ಠ ಪಕ್ಷ: ಡಾ ಅಶ್ವಥ್ ನಾರಾಯಣ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 12, 2022 | 1:59 PM

ಕಾಂಗ್ರೆಸ್ ನಾಯಕರಲ್ಲಿರುವ ಕಿತ್ತಾಟಗಳನ್ನು ನಾವು ನೋಡುತ್ತಿದ್ದೇವೆ, ಸಿದ್ದರಾಮಯ್ಯನವರ ಹುಟ್ಟುಹಬ್ಬ ಕೆಲವರು ಆಚರಿಸಬೇಕು ಅಂತಾರೆ, ಉಳಿದವರು ಬೇಡ ಅನ್ನುತ್ತಾರೆ, ಅವರ ಪಂಚೆ ಎಳೆಯುವ ಕೆಲಸ ಅಲ್ಲಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ರಾಮನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತಾಡಿದ ಜಿಲ್ಲೆಯ ಉಸ್ತುವಾರಿ ಸಚಿವ ಡಾ ಸಿ ಎನ್ ಆಶ್ವಥ್ ನಾರಾಯಣ (Dr CN Ashwath Narayan) ಅವರು ತಮಗೆ ಅಧಿಕಾರದ ಲಾಲಸೆ ಇಲ್ಲ ಮತ್ತು ಯಾವುದೇ ಖಾತೆ ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸುವುದರಲ್ಲಿ ತೃಪ್ತಿಪಟ್ಟುಕೊಳ್ಳುತ್ತೇನೆ ಎಂದು ಹೇಳಿದರು. ಕಾಂಗ್ರೆಸ್ (Congress) ಪಕ್ಷದಲ್ಲಿರುವಂತೆ ಬಿಜೆಪಿಯಲ್ಲಿ ಒಳಜಗಳ, ಭಿನ್ನಾಭಿಪ್ರಾಯಗಳು (differences) ಇಲ್ಲ, ತಮ್ಮ ಪಕ್ಷ ಬಲಿಷ್ಠವಾಗಿದೆ, ಎಂದು ಅವರು ಹೇಳಿದರು. ಕಾಂಗ್ರೆಸ್ ನಾಯಕರಲ್ಲಿರುವ ಕಿತ್ತಾಟಗಳನ್ನು ನಾವು ನೋಡುತ್ತಿದ್ದೇವೆ, ಸಿದ್ದರಾಮಯ್ಯನವರ ಹುಟ್ಟುಹಬ್ಬ ಕೆಲವರು ಆಚರಿಸಬೇಕು ಅಂತಾರೆ, ಉಳಿದವರು ಬೇಡ ಅನ್ನುತ್ತಾರೆ, ಅವರ ಪಂಚೆ ಎಳೆಯುವ ಕೆಲಸ ಅಲ್ಲಿ ನಡೆಯುತ್ತಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ:   Viral Video: ಆಟೋದಲ್ಲಿ 27 ಜನರು ಪ್ರಯಾಣಿಸುತ್ತಿರುವುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು!